Site icon Suddi Belthangady

ಬೆಳ್ತಂಗಡಿ: ಎಸ್.ಡಿ.ಎಂ ಆಂಗ್ಲ ಮಾಧ್ಯಮ ಶಾಲಾ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಜೂನಿಯರ್ ರೆಡ್ ಕ್ರಾಸ್ ನಿಂದ ಕಾರ್ಗಿಲ್ ವಿಜಯ‌ ದಿವಸ್

ಬೆಳ್ತಂಗಡಿ: ಬೆಳ್ತಂಗಡಿ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಂಗ್ಲ ಮಾಧ್ಯಮ ಶಾಲೆಯಲ್ಲಿ ಭಾರತ್ ಸ್ಕೌಟ್ಸ್ ಮತ್ತು ಗೈಡ್ಸ್ ಹಾಗೂ ಜೂನಿಯರ್ ರೆಡ್ ಕ್ರಾಸ್ ನಿಂದ ಕಾರ್ಗಿಲ್ ವಿಜಯ್ ದಿವಸ ಆಚರಿಸಲಾಯಿತು.ಮುಖ್ಯ ಅತಿಥಿಯಾಗಿ ಕಾರ್ಗಿಲ್ ಯೋಧ ಮಾಜಿ ಸೈನಿಕ ಎನ್.ಆರ್.ತಂಗಚ್ಚನ್ ಧರ್ಮಸ್ಥಳ ಇವರು ಆಗಮಿಸಿದ್ದರು.

ಕಾರ್ಗಿಲ್ ಹಾಗೂ ಅವರ ಸೈನ್ಯದ ಬಗ್ಗೆ ಸಿಹಿ-ಕಹಿಗಳನ್ನು ಹಂಚಿಕೊಂಡರು. ಸೈನ್ಯದಲ್ಲಿ ಎದುರಾಳಿಗಳ ದಾಳಿಗಳನ್ನು ಪ್ರತಿಕ್ರಿಯಿಸಿದ ಅವರ ಜೀವನದ ಮಹತ್ವದ ಘಟನೆಗಳನ್ನು ವಿದ್ಯಾರ್ಥಿಗಳಲ್ಲಿ ಹಂಚಿಕೊಂಡರು. ವಿದ್ಯಾರ್ಥಿಗಳಲ್ಲಿ ಸೈನ್ಯಕ್ಕೆ ಸೇರುವಂತಹ ಆಶಾ ಮನೋಭಾವನೆಗಳನ್ನು ಇಟ್ಟುಕೊಂಡು ಜೀವನದಲ್ಲಿ ಸಾಗಬೇಕು ಎಂಬುದನ್ನು ವಿದ್ಯಾರ್ಥಿಗಳಲ್ಲಿ ಪ್ರೋತ್ಸಾಹಗಳನ್ನು ತುಂಬಿದರು. ನಮ್ಮ ದೇಶದ ರಕ್ಷಣೆ ನಮ್ಮದು ಎಂಬುದನ್ನು ವಿದ್ಯಾರ್ಥಿಗಳಲ್ಲಿ ಬಿಂಬಿಸಿದರು.

ಕಾರ್ಗಿಲ್ ಯುದ್ಧದಲ್ಲಿ ಮಡಿದಂತಹ ವೀರ ಯೋಧರನ್ನು ಸ್ಮರಿಸಿ, ಪುಷ್ಪವನ್ನು ಅರ್ಪಿಸಿ, ಮೌನ ಪ್ರಾರ್ಥನೆಯನ್ನು ಕೈಗೊಳ್ಳಲಾಯಿತು.

ವೇದಿಕೆಯಲ್ಲಿ ಮುಖ್ಯ ಪ್ರಭಾರ ಮುಖ್ಯ ಶಿಕ್ಷಕಿ ಜೆಸಿಂತ ರೋಡ್ರಿಗ್ರಸ್ ಉಪಸ್ಥಿತರಿದ್ದರು.

ಕಾರ್ಯಕ್ರಮದಲ್ಲಿ ಜೂನಿಯರ್ ರೆಡ್ ಕ್ರಾಸ್ ವಿದ್ಯಾರ್ಥಿಗಳು, ಭಾರತಿ ಸ್ಕೌಟ್ಸ್ ಮತ್ತು ಗೈಡ್ಸ್ ನ ಬನ್ನಿ, ಕಬ್ ಬುಲ್ ಬುಲ್ ಸ್ಕೌಟ್ಸ್ ಗೈಡ್ಸ್ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.

ಗೈಡ್ ಕ್ಯಾಪ್ಟನ್ ಕಾರುಣ್ಯ ಸ್ವಾಗತಿಸಿ, ಸ್ಕೌಟ್ ಮಾಸ್ಟರ್ ಮಂಜುನಾಥ್ ವಂದಿಸಿದರು. ಭಾರತ್ ಸ್ಕೌಟ್ಸ್ ಮತ್ತು ಗೈಡ್ ಸ್ಥಳೀಯ ಸಂಸ್ಥೆ ಬೆಳ್ತಂಗಡಿಯ ಕಾರ್ಯದರ್ಶಿ, ಭಾರತೀಯ ಜೂನಿಯರ್ ರೆಡ್ ಕ್ರಾಸ್ ಕೌನ್ಸಿಲರ್ ಪ್ರಮೀಳಾ ಕಾರ್ಯಕ್ರಮ ನಿರೂಪಿಸಿದರು.

Exit mobile version