ಬೆಳ್ತಂಗಡಿ: ಮಂಜುಶ್ರೀ ಸೀನಿಯರ್ ಚೇಂಬರ್ ಬೆಳ್ತಂಗಡಿಯಿಂದ ಕಾರ್ಗಿಲ್ ವಿಜಯ ದಿವಸ್ ಜುಲೈ 27ರಂದು ಬೆಳ್ತಂಗಡಿ ಪರಿಕ್ರಮ ಸಭಾಭವನದಲ್ಲಿ ಆಚರಿಸಲಾಯಿತು. ಸಮಾರಂಭದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಕಾರ್ಗಿಲ್ ಯೋಧ ಮತ್ತು ನಿವೃತ್ತ ಸೈನಿಕ ಐ.ಎಮ್ ಸುಬ್ರಮಣಿ ಗೇರುಕಟ್ಟೆ ಇವರನ್ನು ಶಾಲು ಹೊದಿಸಿ ಸನ್ಮಾನಿಸಲಾಯಿತು.
ನಂತರ ಮಾತನಾಡಿ ಕಾರ್ಗಿಲ್ ಯುದ್ಧದಲ್ಲಿ ಮಡಿದಂತಹ ವೀರ ಯೋಧರನ್ನು ಸ್ಮರಿಸಿದರು. ಕಾರ್ಗಿಲ್ ಯುದ್ಧದ ಬಗ್ಗೆ ಸಿಹಿ ಕಹಿಗಳನ್ನು ಹಂಚಿಕೊಂಡರು. ಸೈನ್ಯದಲ್ಲಿ ಎದುರಾಳಿಗಳ ದಾಳಿಗಳನ್ನು ಪ್ರತಿಕ್ರಿಯಿಸಿದ ಅವರ ಜೀವನ ಮಹತ್ವದ ಘಟನೆಗಳನ್ನು ಹಂಚಿಕೊಂಡರು.
ವೇದಿಕೆಯಲ್ಲಿ ಮಂಜುಶ್ರೀ ಸೀನಿಯರ್ ಚೇಂಬರ್ ಅಧ್ಯಕ್ಷ ವಾಲ್ಡರ್ ಸಿಕ್ವೇರಾ, ನಿಕಟ ಪೂರ್ವ ಅಧ್ಯಕ್ಷ ಪೃಥ್ವಿ ರಂಜನ್‌ರಾವ್, ಕಾರ್ಯದರ್ಶಿ ಜಾನ್ ಅರ್ವಿನ್ ಡಿ.ಸೋಜಾ ಕೋಶಾಧಿಕಾರಿ ಪುಷ್ಪರಾಜ್ ಶೆಟ್ಟಿ ಉಪಾಧ್ಯಕ್ಷ ಮಂಜುನಾಥ ರೈ, ಸ್ಥಾಪಕಾಧ್ಯಕ್ಷ ಪ್ರಮೋದ್ ಆರ್ ನಾಯಕ್, ಬಿ.ಪಿ. ಅಶೋಕ್ ಕುಮಾರ್ ಹಾಗೂ ಸೀನಿಯರ್ ಜೇಸಿ ಸದಸ್ಯರು ಉಪಸ್ಥಿತರಿದ್ದರು.
ಐ.ಎಮ್ ಸುಬ್ರಮಣಿರವರು ಕೊಡಗು ಜಿಲ್ಲೆ ವಿರಾಜ ಪೇಟೆಯವರು. ತಮ್ಮ 17ನೇ ವರ್ಷದಲ್ಲಿ 1979ರಲ್ಲಿ ಭಾರತೀಯ ಭೂಸೇನೆ ಸೇರಿದರು.
ಕಾಶ್ಮೀರದ ಕಾರ್ಗಿಲ್ ಯುದ್ಧ ಭೂಮಿಯಲ್ಲಿ ಭಾರತೀಯ ಭೂಸೇನೆಯ ಬೋಪೋರ್ಸ್ ಪಿರಂಗಿಗಳಿಂದ ವೈರಿಗಳನ್ನು ಓಡಿಸಿ ಕಾರ್ಗಿಲ್‌ನ ಟೈಗರ್ ಪರ್ವತಗಳನ್ನು ಜಯಗಳಿಸಿದ ವೀರರು ಕಾರ್ಗಿಲ್ ಯುದ್ಧದ ನಂತರ ಭಾರತೀಯ ಭೂಸೇನೆಯಲ್ಲಿ 21 ವರ್ಷ ದೇಶ ಸೇವೆ ಸಲ್ಲಿಸಿ ಮತ್ತೆ ತಾಯ್ನಾಡಿಗೆ ಮರಳಿದರು. ಅನಂತರ ಬಾರತೀಯ ಸ್ಟೇಟ್‌ಬ್ಯಾಂಕ್ ಬೆಳ್ತಂಗಡಿಯನ್ನು ಅಮೇರ್ಟ್ ಗಾರ್ಡ್ ಆಗಿ ಸೇವೆ ಸಲ್ಲಿಸಿ ಕಳಿಯ ಗ್ರಾಮದಲ್ಲಿ ವಾಸವಾಗಿದ್ದಾರೆ.