Site icon Suddi Belthangady

ಮ್ಯಾರಥಾನ್ ಯೋಗ ತರಬೇತಿಯಿಂದ ಮುಗೇರಡ್ಕ ಶಾಲಾಭಿವೃದ್ಧಿಗೆ ದೇಣಿಗೆ ಹಸ್ತಾಂತರ

ಬೆಳ್ತಂಗಡಿ: ದೇರಳಕಟ್ಟೆ ಯೆನೆಪೋಯ ಮೆಡಿಕಲ್ ಕಾಲೇಜಿನ ರಜತ ಮಹೋತ್ಸವದ ಸಂದರ್ಭದಲ್ಲಿ ಯೋಗ ಗುರು ಕುಶಾಲಪ್ಪ ಗೌಡ ನಿರಂತರವಾಗಿ 25 ಗಂಟೆಗಳ ಮ್ಯಾರಥಾನ್ ಯೋಗ ಬೋಧಿಸಿ ವಿಶ್ವ ದಾಖಲೆ ನಿರ್ಮಿಸಿದ್ದರು.

ಉಚಿತ ಯೋಗ ತರಬೇತಿ ಪಡೆದ ಆಸಕ್ತ ಶಿಬಿರಾರ್ಥಿಗಳಿಂದ ಹಾಗೂ ದಾನಿಗಳಿಂದ ಸಂಗ್ರಹಿಸಿದ 2,25,225 ರೂಪಾಯಿ ಮೊತ್ತದ ಚೆಕ್‌ನ್ನು ಕಾಲೇಜಿನ ಬೆಳ್ಳಿಹಬ್ಬದ ಸಂದರ್ಭದಲ್ಲಿ ಯೆನೆಪೋಯ ವಿಶ್ವವಿದ್ಯಾಲಯದ ಕುಲಪತಿಗಳಾದ ಡಾ.ಯೆನೆಪೋಯ ಅಬ್ದುಲ್ ಕುಂಞ ರವರು ಮುಗೇರಡ್ಕ ಸರಕಾರಿ ಶಾಲಾ ಸೇವಾ ಟ್ರಸ್ಟ್ ನ ಪದಾಧಿಕರಿಗಳಿಗೆ ವಿತರಿಸಿದರು.

ಟ್ರಸ್ಟ್ನ ಸ್ಥಾಪಕಧ್ಯಕ್ಷ, ಯೋಗ ಗುರು ಕುಶಾಲಪ್ಪ ಗೌಡ ನೆಕ್ಕರಾಜೆ ಕಾರ್ಯದರ್ಶಿ ಮನೋಹರ ಗೌಡ ಅಂತರ, ಉಪಾಧ್ಯಕ್ಷ ಆನಂದ ಬಿ, ಟ್ರಸ್ಟಿಗಳಾದ ಬಾಲಕೃಷ್ಣ ಮುಗೇರಡ್ಕ, ಸದಸ್ಯ ಗಂಗಾಧರ ಪೂಜಾರಿ, ಯೋಗ ಶಿಕ್ಷಕ ಗಿರಿಯಪ್ಪ ಎರ್ಮಳ ಹಾಗೂ ಮಾಸ್ಟರ್ ಮೋನಿಶ್ ಯು.ಕೆ ಉಪಸ್ಥಿತರಿದ್ದರು.

Exit mobile version