Site icon Suddi Belthangady

ಬಳಂಜ: ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿ ವತಿಯಿಂದ ವಾಕರ್ ವಿತರಣೆ

ಬಳಂಜ: ಬೆಳ್ತಂಗಡಿ ತಾಲೂಕಿನ ಹೆಸರಾಂತ ಭಜನೆ ಮಂಡಳಿಗಳಲ್ಲಿ ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯು ಒಂದು. ಈ ತಂಡವು ಕೇವಲ ಭಜನೆಯನ್ನು ಮಾತ್ರವಲ್ಲದೆ ಸಮಾಜಮುಖಿ ಕೆಲಸ, ಅಗತ್ಯ ವಸ್ತುಗಳ ಪೂರೈಕೆ, ಧಾರ್ಮಿಕತೆ ಸಾಂಸ್ಕೃತಿಕತೆ, ಮುಂತಾದವುಗಳಲ್ಲಿ ತೊಡಗಿಸಿಕೊಂಡಿದೆ.

ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ತಂಡದ ಸದಸ್ಯರಾದ ಅದ್ವಿತ್ ಮತ್ತು ಕ್ಷಿತಿ ಅವರ ಪೋಷಕರಾದ ವೇದಾವತಿ ಅವರ ತಾಯಿ ಮನೆಯಲ್ಲಿ ಆಕಸ್ಮಿಕವಾಗಿ ಬಿದ್ದು ಪೆಟ್ಟಾಗಿದ್ದು ಈಗಾಗಲೇ ಆಸ್ಪತ್ರೆಯಲ್ಲಿ ಶಸ್ತ್ರ ಚಿಕಿತ್ಸೆಯನ್ನು ಮಾಡಿಸಿ ಚೇತರಿಸಿಕೊಂಡಿದ್ದಾರೆ.

ಆದರೆ ಅವರಿಗೆ ಇನ್ನೊಬ್ಬರ ಸಹಾಯವಿಲ್ಲದೆ ನಡೆದಾಡಲು ಕಷ್ಟವಾಗುತಿದ್ದು ಇದೀಗ ಅವರಿಗೆ ನಡೆದಾಡಲು ವಾಕರ್ ನ ಅವಶ್ಯಕತೆ ಇದ್ದು ಅದನ್ನು ಬ್ರಹ್ಮಶ್ರೀ ಕುಣಿತ ಭಜನಾ ಮಂಡಳಿಯ ಆರೋಗ್ಯ ಸೇವಾ ಎಂಟನೇ ಯೋಜನೆಯ ಮೂಲಕ ಜು.28ರಂದು ಅವರಿಗೆ ಹಸ್ತಾಂತರ ಮಾಡಲಾಯಿತು.

ಈ ಸೇವಾ ಯೋಜನೆಗೆ ಯುವ ಉದ್ಯಮಿಗಳಾದ ಎನ್ವಿಗ್ರೀನ್ ಬಯೋಟೆಕ್ ಸಂಸ್ಥಾಪಕರು ಅಶ್ವಥ್ ಹೆಗ್ಡೆ ಬಳಂಜ ಇವರು ಕೂಡ ಕೈ ಜೋಡಿಸಿದ್ದು, ವೇದಾವತಿ ಅವರ ಮನೆಗೆ 30 ಕೆಜಿ ಅಕ್ಕಿ ಮತ್ತು ಎಲ್ಲಾ ದಿನಸಿ ಸಾಮಗ್ರಿಗಳನ್ನೂ ನೀಡಲು ಸಹಾಯಹಸ್ತ ನೀಡಿದರು.

ಈ ಸಂದರ್ಭದಲ್ಲಿ ಮಂಡಳಿಯ ಸಂಚಾಲಕರು ಹರೀಶ್ ವೈ ಚಂದ್ರಮ, ಅದ್ಯಕ್ಷರು ಜ್ಯೋತಿ ಪೂಜಾರಿ, ಗುರುಗಳು ಮಾನ್ಯ ಹಾಗೂ ತಂಡದ ಪದಾಧಿಕಾರಿಗಳು ಹಾಗೂ ಸದಸ್ಯರು ಮತ್ತು ತಂಡದ ಪೋಷಕರು ಹಾಜರಿದ್ದರು.

Exit mobile version