Site icon Suddi Belthangady

ಕುಕ್ಕೇಡಿ: ಶ್ರೀ ಶಾರದಾಂಬ ಭಜನಾ ಮಂಡಳಿಯ ಅಧ್ಯಕ್ಷರಾಗಿ ಹರೀಶ್ ಬಂಗೇರ, ಪ್ರ.ಕಾರ್ಯದರ್ಶಿಯಾಗಿ ನವೀನ್ ಜಿ., ಕೋಶಾಧಿಕಾರಿಯಾಗಿ ಸುದೀಪ್ ಕುಮಾರ್

ಕುಕ್ಕೇಡಿ: ಕುಕ್ಕೇಡಿ ಶ್ರೀ ಶಾರದಾಂಬ ಭಜನಾ ಮಂಡಳಿಯ ವಾರ್ಷಿಕ ಮಹಾ ಸಭೆ ಭಜನಾ ಮಂದಿರದ ತಿಮ್ಮಯ್ಯ ಬಲ್ಲಾಳ್ ಸಭಾ ಭವನದಲ್ಲಿ ಭಜನಾ ಮಂಡಳಿಯ ಅಧ್ಯಕ್ಷ ಪ್ರಕಾಶ್ ಪೂಜಾರಿಯವರ ಅಧ್ಯಕ್ಷತೆಯಲ್ಲಿ ಜರಗಿತು.

ಕುಕ್ಕೇಡಿ ಗ್ರಾಮ ಪಂಚಾಯತ್ ಸದಸ್ಯ ಗೋಪಾಲ ಶೆಟ್ಟಿ, ಮಹಿಳಾ ಸಮಿತಿಯ ಅಧ್ಯಕ್ಷೆ ಶಕುಂತಲಾ ಕೃಷ್ಣಪ್ಪ ದೇವಾಡಿಗ ವೇದಿಕೆಯಲ್ಲಿ ಉಪಸ್ಥಿತರಿದ್ದರು.ಈ ಸಂದರ್ಭದಲ್ಲಿ ನೂತನ ಪದಾಧಿಕಾರಿಗಳಆಯ್ಕೆ ಮಾಡಲಾಯಿತು.

ಅಧ್ಯಕ್ಷರಾಗಿ ಹರೀಶ್ ಬಂಗೇರ, ಪ್ರಧಾನ ಕಾರ್ಯದರ್ಶಿಯಾಗಿ ನವೀನ್ ಜಿ., ಕೋಶಾಧಿಕಾರಿಯಾಗಿ ಸುದೀಪ್ ಕುಮಾರ್ ಹಾಗೂ ಇತರ ಪದಾಧಿಕಾರಿಗಳಾಗಿ ಗೌರವಾಧ್ಯಕ್ಷರಾಗಿ ರಾಜೇಶ್ ಜೈನ್ ಬುಳೆಕ್ಕರ, ಉಪಾಧ್ಯಕ್ಷರುಗಳಾಗಿ ಚಂದ್ರಹಾಸ ಪೂಜಾರಿ, ನಿತಿನ್ ಪೂಜಾರಿ, ಕಾರ್ಯದರ್ಶಿಯಾಗಿ ರಕ್ಷಿತ್ ಪೂಜಾರಿ, ಜತೆಕಾರ್ಯದರ್ಶಿಯಾಗಿ ನಿತೇಶ್ ಮಂಗತ್ಯಾರು, ಭಜನಾ ಸಂಚಾಲಕರಾಗಿ ಗಣೇಶ್ ಪೂಜಾರಿ, ಲೆಕ್ಕಪರಿಶೋಧಕರಾಗಿ ಸತೀಶ್ ಬಂಗೇರ, ಕಾರ್ಯಾಧ್ಯಕ್ಷರಾಗಿ ದಯಾನಂದ ಶೆಟ್ಟಿ, ಗೌರವ ಸಲಹೆಗಾರರಾಗಿ ಗೋಪಾಲ ಶೆಟ್ಟಿ, ವಿಶ್ವನಾಥ ದೇವಾಡಿಗ, ಪ್ರಕಾಶ್ ಪೂಜಾರಿ, ಸುಂದರ ದೇವಾಡಿಗ, ನಾರಾಯಣ ನಾಯ್ಕ ಹಾಗೂ ಇತರ 30 ಮಂದಿ ಕಾರ್ಯಕಾರಿ ಸಮಿತಿ ಸದಸ್ಯರುಗಳನ್ನು ಆಯ್ಕೆಮಾಡಲಾಯಿತು.

ಪ್ರವೀಣ್ ಪೂಜಾರಿ ಸ್ವಾಗತಿಸಿ, ಜಗದೀಶ್ ಕುಮಾರ್ ನಿರೂಪಿಸಿದರು.ನವೀನ್ ಜಿ. ವಂದಿಸಿದರು.

Exit mobile version