Site icon Suddi Belthangady

ಬೆಳ್ತಂಗಡಿ ಮೂಲ್ಯರ ಯಾನೆ ಕುಂಬಾರ ಸಂಘದಿಂದ ಲೋಕಸಭಾ ಕ್ಷೇತ್ರದ ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ ಅಭಿನಂದನಾ ಕಾರ್ಯಕ್ರಮ- ವಿದ್ಯಾರ್ಥಿ ವೇತನ ವಿತರಣೆ ಮತ್ತು ಆಟಿದ ಕೂಟ ಕಾರ್ಯಕ್ರಮ

ಬೆಳ್ತಂಗಡಿ: ತಾಲೂಕು ಮೂಲ್ಯರ ಯಾನೆ ಕುಂಬಾರರ ಸೇವಾ ಸಂಘ ಗುರುವಾಯನಕೆರೆ, ಬೆಳ್ತಂಗಡಿ ತಾಲೂಕು ದ.ಕ., ಮತ್ತು ಕುಲಾಲ/ಕುಂಬಾರರ ಯುವ ವೇದಿಕೆ ಬೆಳ್ತಂಗಡಿ ತಾಲೂಕು ಇದರ ಸಹಯೋಗದಲ್ಲಿ ಮಂಗಳೂರು ಲೋಕಸಭಾ ಕ್ಷೇತ್ರದ ನೂತನ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ“ಅಭಿನಂದನಾ ಕಾರ್ಯಕ್ರಮ” ಹಾಗೂ ವಿದ್ಯಾರ್ಥಿ ವೇತನ ವಿತರಣೆ ಮತ್ತು ಆಟಿದ ಕೂಟ ಕಾರ್ಯಕ್ರಮ ಜು.28ರಂದು ಗುರುವಾಯನಕೆರೆ ಕುಲಾಲ ಭವನದಲ್ಲಿ ನಡೆಯಿತು.

ನೂತನವಾಗಿ ಆಯ್ಕೆಯಾದಂತಹ ದಕ್ಷಿಣ ಕನ್ನಡ ಜಿಲ್ಲೆಯ ಸಂಸದ ಕ್ಯಾಪ್ಟನ್ ಬ್ರಿಜೇಶ್ ಚೌಟರವರಿಗೆ ಅಭಿನಂದನಾ ಕಾರ್ಯಕ್ರಮವನ್ನು ನಡೆಸಲಾಯಿತು. ಬಳಿಕ ಮಾತನಾಡಿದ ಸಂಸದರು ನೂತನವಾಗಿ ನಿರ್ಮಾಣವಾಗಲಿರುವ ಕುಲಾಲರ ಸಭಾಭವನದ ನಿರ್ಮಾಣಕ್ಕೆ ನನ್ನ ಕೈಯಲಾಗುವ ಪ್ರಯತ್ನವನ್ನ ಮಾಡಲಾಗುವುದು ಹಾಗೂ ನಾವು ಸದಾ ನಿಮ್ಮ ಸಮುದಾಯದ ಜೊತೆ ಬೆಂಬಲವಾಗಿ ಇದ್ದೇವೆ ಎನ್ನುವಂತಹ ಭರವಸೆಯ ಮಾತನಾಡಿದರು. ಮುಖ್ಯ ಅತಿಥಿಯಾಗಿ ಆಗಮಿಸಿದ ಬೆಳ್ತಂಗಡಿ ತಾಲೂಕಿನ ಶಾಸಕ ಹರೀಶ್ ಪೂಂಜಾ ಅವರು ಮಾತನಾಡಿ ನಮ್ಮ ಸರಕಾರ ಇರುವಾಗ ಕೊಟ್ಟಂತಹ ಭರವಸೆಯನ್ನು ಖಂಡಿತ ನಾನು ಈಡೇರಿಸುತ್ತೇನೆ ನನ್ನ ಶಾಸಕ ಅನುದಾನದಲ್ಲಿ 30 ಲಕ್ಷ ರೂಪಾಯಿಯನ್ನು ಸಮುದಾಯ ಭವನದ ನಿರ್ಮಾಣಕ್ಕೆ ನೀಡುವುದಾಗಿ ಭರವಸೆಯನ್ನ ನೀಡಿದರು.

ಈ ಸಂದರ್ಭದಲ್ಲಿ ಕುಲಾಲ ಸಮುದಾಯದಲ್ಲಿ ಎಸ್ ಎಸ್ ಎಲ್ ಸಿ ಹಾಗೂ ಪಿಯುಸಿಯಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳನ್ನು ಸನ್ಮಾನಿಸಿ ಗೌರವಿಸಲಾಯಿತು ಒಟ್ಟು 70ಕ್ಕೂ ಹೆಚ್ಚು ವಿದ್ಯಾರ್ಥಿಗಳನ್ನು ಕಾರ್ಯಕ್ರಮದಲ್ಲಿ ಗೌರವಿಸಲಾಯಿತು.

ಕಾರ್ಯಕ್ರಮದಲ್ಲಿ ವಿವಿಧ ಬಗೆಯ ಆಟಿಯ ತಿನಿಸುಗಳನ್ನು ತಯಾರಿಸಲಾಯಿತು ಹಾಗೆ ಮನೋರಂಜನ ಕಾರ್ಯಕ್ರಮಗಳನ್ನು ಕೂಡ ಆಯೋಜಿಸಲಾಗಿತ್ತು.ಅಧ್ಯಾಪಕ ಜಗನ್ನಾಥ್ ಕುಲಾಲ್ ಹಾಗೂ ಸತೀಶ್ ಬಂಗೇರ ಕಾರ್ಯಕ್ರಮ ನಿರೂಪಿಸಿದರು. ಸಂಘದ ಕಾರ್ಯದರ್ಶಿ ಯತೀಶ್ ಸಿರಿಮಜಲು ಸ್ವಾಗತಿಸಿದರು ಮತ್ತು ಉಪನ್ಯಾಸಕ ಸುಧೀರ್ ಕೆ.ಎನ್ ವಂದಿಸಿದರು.

Exit mobile version