Site icon Suddi Belthangady

ಉಜಿರೆ: ಕೆ.ಎಸ್.ಎಂ.ಸಿ.ಎ ಸಂಘಟನೆಯಿಂದ ಕಾರ್ಗಿಲ್ ವಿಜಯೋತ್ಸವದ 25ನೇ ವರ್ಷಾಚರಣೆಯ ಅಂಗವಾಗಿ ನಿವೃತ್ತ ಸೈನಿಕರಿಗೆ ಸನ್ಮಾನ

ಉಜಿರೆ: ಕೆ.ಎಸ್.ಎಂ.ಸಿ.ಎ ಸಂಘಟನೆಯಿಂದ ಕಾರ್ಗಿಲ್ ವಿಜಯೋತ್ಸವ 25ನೇ ವರ್ಷಾಚರಣೆಯ ಅಂಗವಾಗಿ ನಿವೃತ್ತ ಸೈನಿಕರಿಗೆ ಸನ್ಮಾನ ಕಾರ್ಯಕ್ರಮ ನಡೆಯಿತು.ಧರ್ಮಕ್ಷೇತ್ರದಲ್ಲಿ ನೆಲೆಸಿರುವ ರೊಯ್ ಅಂಬಿಕೋನತ್ ಮತ್ತು ಡೇವಿಸ್ ಕಣ್ಣುಕಡನ್ ರವರನ್ನು ಸನ್ಮಾನಿಸಲಾಯಿತು.ಉಜಿರೆ ಸೆಂಟ್ ಜಾರ್ಜ್ ಚರ್ಚ್ ನ ಧರ್ಮಗುರುಗಳು ಫಾ ಬಿಜು ಮ್ಯಾಥ್ಯೂ ಅಂಬಟ್ ಶಾಲನ್ನು ಹೊದಿಸಿ ಸನ್ಮಾನಿಸಿದರು.

ಉಜಿರೆ ಘಟಕ ಅಧ್ಯಕ್ಷರು ಜೋಬಿ ಮುಳವನ ರವರು ಸ್ಮರಣಿಕೆ ನೀಡಿ ಸನ್ಮಾನಿಸಿದರು. ಕೆ ಎಸ್ ಎಂ ಸಿ ಎ ಕೇಂದ್ರ ಸಮಿತಿಯ ನಿರ್ದೇಶನದಂತೆ ಬೆಳ್ತಂಗಡಿ ಧರ್ಮಕೇಂದ್ರದ ಎಲ್ಲ ಚರ್ಚ್ ಗಳಲ್ಲಿಯೂ ಈ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.ಇದರೊಟ್ಟಿಗೆ ಎಸ್ ಎಸ್ ಎಲ್ ಸಿ ಉನ್ನತ ಶ್ರಣಿಯಲ್ಲಿ ತೇರ್ಗಡೆಗೊಂಡ ಮಕ್ಕಳನ್ನು ಗೌರವಿಸಲಾಯಿತು.

ದಿವ್ಯ ಬಲಿಪೂಜೆ ಮತ್ತು ಸಂತ ಅಲ್ಫೋನ್ಸರವರ ಹಬ್ಬವನ್ನು ಆಚರಿಸಲಾಯಿತು.ಕಾರ್ಯಕ್ರಮದಲ್ಲಿ ಉಜಿರೆ ಘಟಕದ ಉಪಾಧ್ಯಕ್ಷೆ ಲಿಜಿ ಜಾನ್ಸನ್, ಜೇಮ್ಸ್ ನೆಲ್ಲಿಕುನ್ನಲ್, ಮನೋಜ್ ಪಟ್ಟೆರಿಲ್, ಡ್ಯಾನಿಶ್ ಉಜಿರೆ, ಸನ್ನಿ ಬೆಳಾಲ್, ಚೆರಿಯನ್, ಶೋಭಾ ಕೊಲ್ಲಿಯಿಲ್, ಬಿಂದು , ರಿನ್ಸ್ ಉಜಿರೆ ಮತ್ತು ಪಾಲನಾ ಸಮಿತಿ ಎಲ್ಲಾ ಭಕ್ತ ವೃಂದದವರು ಉಪಸ್ಥಿತರಿದ್ದರು.

ಶ್ರೀ ರೊಯ್ ಅಂಬಿಕೋನತ್ ರವರು 1980ರಲ್ಲಿ ಸೇನೆಗೆ ಸೇರಿ ಮಿಸೋರಮ್, ಅಹ್ಮದಾಬಾದ್, ಸಿಕ್ಕಿಂ ಜೈಪುರ್, ಕಾಶ್ಮೀರ, ಶ್ರೀಲಂಕಾದ ಜಾಫ್ನ, ಬೆಂಗಳೂರು ಮುಂತಾದೆಡೆ ಸೇವೆ ಸಲ್ಲಿಸಿ 2001ರಲ್ಲಿ ನಿವೃತ್ತಿ ಹೊಂದಿದರು.

ಡೇವಿಸ್ ಕಣ್ಣುಕಾಡನ್ ರವರು 1992ರಲ್ಲಿ ಸೇನೆಗೆ ಸೇರಿ ಜಾವಲ್ಪುರ್, ಜಲಂಧರ್, ಮಧುರೈ, ದೆಹಲಿ, ಶ್ರೀನಗರ, ಗುಡ್ಗವ್, ಲಡಾಕ್, ಕಾರ್ಗಿಲ್ ಯುದ್ಧದಲ್ಲಿ ಪಾಲ್ಗೊಂಡಿದ್ದರು.

ಇವರು 2008ರಲ್ಲಿ ನಿವೃತ್ತಿ ಹೊಂದಿದ್ದರು.ಇವರ ನಿವೃತ್ತಿ ಜೀವನವು ಸುಗಮವಾಗಿರಲಿ ಎಂದು ಕೆ ಎಸ್ ಎಂ ಸಿ ಎ ಹಾರೈಸಲಾಯಿತು.

Exit mobile version