Site icon Suddi Belthangady

ವಿಶ್ವಕರ್ಮ ಸಮುದಾಯಗಳ ಪರವಾಗಿ ನೂತನ ಸಂಸದ ಕ್ಯಾ.ಬ್ರಿಜೇಶ್ ಚೌಟರವರಿಗೆ ಅಭಿನಂದನಾ ಕಾರ್ಯಕ್ರಮ

ಬೆಳ್ತಂಗಡಿ: ತಾಲೂಕಿನ ವಿಶ್ವಕರ್ಮ ಸಮುದಾಯಗಳ ಪರವಾಗಿ ಶ್ರೀ ವಿಶ್ವಕರ್ಮಾಭ್ಯುದಯ ಸಭಾ ಲಾಯಿಲ ಹಾಗೂ ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘ ಲಾಯಿಲ ವತಿಯಿಂದ ನೂತನ ಸಂಸದ ಕ್ಯಾ| ಬ್ರಿಜೇಶ್ ಚೌಟರವರಿಗೆ ಅಭಿನಂದನಾ ಕಾರ್ಯಕ್ರಮವು ಜು.28ರಂದು ಲಾಯಿಲ ವಿಶ್ವಕರ್ಮ ಸಭಾಭವನದಲ್ಲಿ ನಡೆಯಿತು.ಸಂಸದ ಕ್ಯಾ| ಬ್ರಿಜೇಶ್ ಚೌಟ ಮಾತನಾಡಿ ವಿಶ್ವಕರ್ಮ ಸಮಾಜದ ಜೊತೆಗೆ ನಾವೆಲ್ಲರೂ ಇದ್ದೇವೆ. ವಿಶ್ವಕರ್ಮ ಸಮಾಜ ನಮ್ಮ ಪಕ್ಷವನ್ನು ಕಟ್ಟಿ ಬೆಳೆಸುವಲ್ಲಿ ದೊಡ್ಡ ಪಾತ್ರ ವಹಿಸಿದೆ ಎಂದರು.

ಸಂಸದರ ನಿಧಿಯಿಂದ ನೂತನ ಸಭಾಭವನಕ್ಕೆ ಅನುದಾನ ಒದಗಿಸುವ ಬಗ್ಗೆ ಮನವಿ ಮತ್ತು ಸಂಘದ ಸಭಾಭವನ ನಿರ್ಮಾಣದ ಜೊತೆಗೆ ಶಿಲ್ಪಕಲಾ ಕೇಂದ್ರ ಮತ್ತು ಪಂಚಕಸುಬುಗಳನ್ನು ಉತ್ತೇಜಿಸಲು ಅಧ್ಯಯನ ಕೇಂದ್ರ ತೆರೆಯಲು ಕೇಂದ್ರ ಸರಕಾರದ ಸಂಬಂಧಪಟ್ಟ ಇಲಾಖೆಗಳಿಂದ ವಿಶೇಷ ಅನುದಾನ ಒದಗಿಸಿಕೊಡುವ ಬಗ್ಗೆ ಹಾಗೂ ಜನಸಾಮಾನ್ಯರ ಅನುಕೂಲಕ್ಕಾಗಿ “ಪಿ.ಎಂ. ವಿಶ್ವಕರ್ಮ” ಯೋಜನೆಯ ತರಬೇತಿ ಕೇಂದ್ರವನ್ನು ತಾಲೂಕಿನಲ್ಲಿ ನಡೆಸುವಂತೆ ಹಾಗೂ ಕಬ್ಬಿಣ ಕೆಲಸದ ಸಂಘದ ವಿವಿಧ ಬೇಡಿಕೆಗಳ ಮನವಿಯನ್ನು ನೂತನ ಸಂಸದ ಕ್ಯಾ | ಬ್ರಿಜೇಶ್ ಚೌಟರಿಗೆ ಮನವಿ ಸಲ್ಲಿಸಲಾಯಿತು.

ವೇದಿಕೆಯಲ್ಲಿ ವಿಧಾನ ಪರಿಷತ್ ಸದಸ್ಯ ಪ್ರತಾಪ್ ಸಿಂಹ ನಾಯಕ್, ಬಿಜೆಪಿ ಜಿಲ್ಲಾ ನಾಯಕ ಹರಿಕೃಷ್ಣ ಬಂಟ್ವಾಳ, ಬೆಳ್ತಂಗಡಿ ಮಂಡಲ ಅಧ್ಯಕ್ಷ ಶ್ರೀನಿವಾಸ್ ರಾವ್, ಶ್ರೀ ವಿಶ್ವಕರ್ಮಾಭ್ಯುದಯ ಸಭಾದ ಅಧ್ಯಕ್ಷ ಗಣೇಶ್ ಆಚಾರ್ಯ ಬಲ್ಯಾಯಕೋಡಿ ಉಪಸ್ಥಿತರಿದ್ದರು.

ಈ ಸಂದರ್ಭದಲ್ಲಿ ಶ್ರೀ ವಿಶ್ವಕರ್ಮಾಭ್ಯುದಯ ಸಭಾದ ಉಪಾಧ್ಯಕ್ಷ ರಾಘವೇಂದ್ರ ಆಚಾರ್ಯ ನೈಕುಳಿ, ಕೋಶಾಧಿಕಾರಿ ಸದಾನಂದ ಆಚಾರ್ಯ ಅಳದಂಗಡಿ, ಸಂಘಟನಾ ಕಾರ್ಯದರ್ಶಿ ಸಂತೋಷ್ ಆಚಾರ್ಯ ಬಿ.ಕೆ ಶಿವಪ್ರಸಾದ್ ಪುರೋಹಿತರು, ಸೀತಾರಾಮ ಆಚಾರ್ಯ ಕೆರಳೇಕೊಡಿ, ಸತೀಶ್ ಆಚಾರ್ಯ ಬಿ.ಕೆ, ನಿವೃತ್ತ ತಹಸೀಲ್ದಾರ್ ರಾಘವೇಂದ್ರ ಆಚಾರ್ಯ ನಿಸರ್ಗ ಬಾರ್ಯ, ಉಮೇಶ್ ಆಚಾರ್ಯ ಕಾನರ್ಪ, ರಮೇಶ್ ಆಚಾರ್ಯ ಮದ್ದಡ್ಕ, ಗುರುಸೇವಾ ಪರಿಷತ್ ಸಂಘಟನಾ ಕಾರ್ಯದರ್ಶಿ ಮಂಜುನಾಥ ಆಚಾರ್ಯ ಅಳದಂಗಡಿ, ಪ್ರಕಾಶ್ ಆಚಾರ್ಯ ಅಲ್ಲಾಟಬೈಲು ಹರಿಪ್ರಸಾದ್ ಆಚಾರ್ಯ ಬಿ.ಕೆ, ವಿಶ್ವಕರ್ಮ ಕಮ್ಮಾರರ ಗುಡಿಕೈಗಾರಿಕೆ ಸಂಘದ ಅಧ್ಯಕ್ಷ ಆನಂದ ಆಚಾರ್ಯ ಮಾಪಲಾಡಿ, ಕಾರ್ಯದರ್ಶಿ ಸುಧಾಕರ ಆಚಾರ್ಯ ಗೇರುಕಟ್ಟೆ, ರುಕ್ಮಯ ಆಚಾರ್ಯ ಕನ್ನಾಜೆ, ಶಿಲ್ಪಿ ಜಯಚಂದ್ರ ಆಚಾರ್ಯ, ವಿಶ್ವಕರ್ಮ ಯುವಮಿಲನ ಅಧ್ಯಕ್ಷ ಸುಧಾಕರ್ ಆಚಾರ್ಯ ವೇಣೂರು, ಶ್ರೀ ಗಾಯತ್ರಿ ವಿಶ್ವಕರ್ಮ ಮಹಿಳಾ ಸಂಘದ ಅಧ್ಯಕ್ಷೆ ಉಷಾ ಹರಿಪ್ರಸಾದ್, ಕಾರ್ಯದರ್ಶಿ ಪುಷ್ಪಾ ಗಣೇಶ್ ಆಚಾರ್ಯ, ಆಶಾ ಸತೀಶ್ ಆಚಾರ್ಯ, ಮೀನಾಕ್ಷಿ ಗೋಪಾಲ್ ಆಚಾರ್ಯ, ಪ್ರಸನ್ನ ಅಶೋಕ್ ಆಚಾರ್ಯ ಮತ್ತು ಸಂಘದ ಪದಾಧಿಕಾರಿಗಳು, ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

ಕಾರ್ಯದರ್ಶಿ ರಾಮ್ ಪ್ರಸಾದ್ ಎನ್ ಎಸ್ ಗುಂಪಲಾಜೆ ನಿರೂಪಿಸಿ, ವಂದಿಸಿದರು.

Exit mobile version