ನೆರಿಯ: ನೆರಿಯ ಗ್ರಾಮದ ಕುವೆತೈಲ್ ಅನಿಲ್ ಎಂಬುವವರ ಮನೆಯ ಹಿಂಬದಿಯಲ್ಲಿ ಆಕಸ್ಮಿಕವಾಗಿ ಬೆಂಕಿ ತಗುಲಿ ಸಂಪೂರ್ಣವಾಗಿ ಮನೆಗೆ ಹಾನಿಯಾಗಿರುವ ಘಟನೆ ಜುಲೈ 28ರಂದು ಮಧ್ಯಾಹ್ನ ನಡೆದಿದೆ.ಮನೆಯಲ್ಲಿ 4 ಜನರು ವಾಸವಿದ್ದು, ಎಲ್ಲರೂ ಕ್ಷೇತ್ರವೊಂದಕ್ಕೆ ಭೇಟಿ ನೀಡಿದ್ದು ಮನೆಯಲ್ಲಿ ಯಾರು ಇಲ್ಲದ ವೇಳೆಯಲ್ಲಿ ಈ ಘಟನೆ ಸಂಭವಿಸಿದೆ.
ಬೆಂಕಿಯು ಮನೆಯ ಹಿಂಬದಿಯ ನೆಟ್ ಒಂದಕ್ಕೆ ತಗುಲಿ ನಂತರ ಮನೆಯಲ್ಲಿದ್ದ ಪುಸ್ತಕಕ್ಕೆ ಸ್ಪರ್ಶಿಸಿ ಹೊತ್ತಿ ಉರಿಯುತ್ತಿದ್ದನ್ನು ನೋಡಿದ ಸ್ಥಳೀಯ ನಿವಾಸಿ ತಮ್ಮ ಆನಂದ್, ಅಶೋಕ್, ಸತೀಶ್, ಧರ್ಣಪ್ಪ ಗೌಡ, ಯಶೋಧ, ಗೀತಾ, ರಮಾನಂದ, ತಕ್ಷಣ ಬಂದು ಬೆಂಕಿ ನಂದಿಸುವಲ್ಲಿ ಕಾರ್ಯಪ್ರವೃತ್ತರಾದರು.
ಆದರೆ ಬೆಂಕಿಯು ಮನೆಯ ಸುತ್ತಲೂ ಆವರಿಸಿದ್ದು ಸಂಪೂರ್ಣವಾಗಿ ಸುಟ್ಟು ಹೋಗಿದೆ ಎಂದು ತಿಳಿದುಬಂದಿದೆ.