ಪದ್ಮುಂಜ: ಇಲ್ಲಿಯ ಕೊರಜಂಡ ನಿವಾಸಿ ಗಿರಿಜ ಎಂಬವರ ಮಗ ರಂಜಿತ್ (32 ವರ್ಷ) ಎಂಬವರು ತನ್ನ ಅಕ್ಕನ ಮನೆ ಇಂದಬೆಟ್ಟು ಎಂಬಲ್ಲಿ ಮರಣ ಹೊಂದಿರುವುದು ತಿಳಿದು ಬಂದಿದೆ.
ಐದು ದಿನಗಳ ಹಿಂದೆ ತನ್ನ ಅಕ್ಕ ಆರೋಗ್ಯ ಸಹಾಯಕಿ ಸಾವಿತ್ರಿಯವರ ಮನೆ ಇಂದಬೆಟ್ಟುವಿಗೆ ಹೋಗಿದ್ದರೆನ್ನಲಾಗಿದೆ. ಜು.28ರಂದು ಬೆಳಿಗ್ಗೆ ಸುಮಾರು 9 ಗಂಟೆಗೆ ಶೌಚಾಲಯಕ್ಕೆ ಹೋದವರು ತುಂಬಾ ಹೊತ್ತಿನವರೆಗೂ ಬಾರದಿರುವುದನ್ನು ಗಮನಿಸಿದ ಮನೆಯವರು ಕರೆದರೂ ಪ್ರತಿಕರಿಸದಿರುವಾಗ ಬಾಗಿಲು ಒಡೆದು ನೋಡಿದ್ದು ಶೌಚಾಲಯದೊಳಗೇ ಬಿದ್ದು ಮರಣ ಹೊಂದಿದ್ದಾರೆಂದು ತಿಳಿದು ಬಂದಿದೆ.
ಇವರು ತಾಯಿ ಗಿರಿಜ, ಸಹೋದರಿ ಆರೋಗ್ಯ ಸಹಾಯಕಿ ಸಾವಿತ್ರಿ, ಸಹೋದರ ರೋಶನ್ ಸೇರಿದಂತೆ ಬಂದು ಮಿತ್ರಾದಿಗಳನ್ನು ಅಗಲಿದ್ದಾರೆ.