ಮೊಗ್ರು: ಮೊಗ್ರು ಗ್ರಾಮದ ಮುಗೇರಡ್ಕ ಮೂವರು ದೈವಸ್ಥಾನದ ಹಿಂಭಾಗದ ನೈಮಾರ್, ಪರಾರಿ, ದoಬೆತ್ತಿಮಾರು ಪರಿಸರದ ಸುಮಾರು 20 ಮನೆಯವರ ತೋಟಕ್ಕೆ ಸತತವಾಗಿ 4 ದಿನಗಳಿಂದ ಸುರಿದ ವಿಪರೀತ ಮಳೆಯಿಂದಾಗಿ ನೇತ್ರಾವತಿ ನದಿ ಸಂಪರ್ಕದ ತೋಡಿನ ನೀರು ಮತ್ತು ಕೆಸರು ಮಣ್ಣು ತೋಟಕ್ಕೆ ನುಗ್ಗಿ ಅಡಿಕೆ, ತೆಂಗು ಇನ್ನಿತರ ಬೆಳೆಗಳ ಸ್ಥಿತಿಯ ಬಗ್ಗೆ ಆ ಭಾಗದ ಕೃಷಿಕರು ಆತಂಕದಲ್ಲಿದ್ದು ಅಪಾರ ನಷ್ಟ ಉಂಟಾಗಿರುವ ಬಗ್ಗೆ ವರದಿಯಾಗಿದೆ.
ಸಂಪೂರ್ಣ ತೋಟದ ಮೇಲ್ಬಾಗದಲ್ಲಿ ಸಂಪೂರ್ಣ ಕೆಸರು ಮಣ್ಣು ನಿಂತು ಕೃಷಿಕರಿಗೆ ಭಯ ಭೀತಿ ಉಂಟಾಗಿದೆ.ಬಂದಾರು ಗ್ರಾಮ ಪಂಚಾಯತ್ ಅಧ್ಯಕ್ಷ ದಿನೇಶ್ ಗೌಡ ಖಂಡಿಗ, ಸದಸ್ಯರಾದ ಬಾಲಕೃಷ್ಣ ಗೌಡ ಮುಗೇರಡ್ಕ, ಗಂಗಾಧರ ಪೂಜಾರಿ, ಪಂಚಾಯತ್ ಅಭಿವೃದ್ಧಿ ಅಧಿಕಾರಿ ಹಾಗೂ ಕಂದಾಯ ಇಲಾಖೆಯ ಸಿಬ್ಬಂದಿ ಭೇಟಿ ನೀಡಿ ಮಾಹಿತಿ ಪಡೆದುಕೊಂದಿರುವ ಬಗ್ಗೆ ಮಾಹಿತಿ ಲಭ್ಯವಾಗಿದೆ.
2019ನೇ ವರ್ಷದಲ್ಲಿ ಈ ಭಾಗದ ಕೃಷಿಕರಿಗೆ ಇದೆ ರೀತಿಯ ವಾತಾವರಣ ನಿರ್ಮಾಣವಾಗಿತ್ತು. ಪರಿಹಾರ ಪಡೆಯುವಲ್ಲಿ ವಂಚಿರಾಗಿದ್ದಾರೆ.ಸಂಬಂಧ ಪಟ್ಟ ಇಲಾಖೆ ಇದರ ಬಗ್ಗೆ ಸರಿಯಾಗಿ ಪರಿಶೀಲನೆ ಮಾಡಿ ಸೂಕ್ತ ಪರಿಹಾರ ನೀಡಬೇಕಾಗಿ ಹಾನಿ ಸಂಭವಿಸಿದ ಕೃಷಿಕರ ಒಮ್ಮತದ ಬೇಡಿಕೆಯಾಗಿದೆ.