ನೆಲ್ಯಾಡಿ: ಬೆಳ್ತಂಗಡಿ ಧರ್ಮ ಪ್ರಾಂತ್ಯದ ಸಂತ ಅಲ್ಫೋನ್ಸ ಪುಣ್ಯ ಕ್ಷೇತ್ರ ನೆಲ್ಯಾಡಿಯಲ್ಲಿ ಜುಲೈ 26ರಂದು ಭಾರತೀಯ ಸೇನೆಯು ಪಾಕಿಸ್ತಾನವನ್ನು ಕಾರ್ಗಿಲ್ ಯುದ್ಧದಲ್ಲಿ ಪರಾಭವಗೊಳಿಸಿದ ಸವಿ ನೆನಪಿನ ಕಾರ್ಗಿಲ್ ವಿಜಯ ದಿವಸ್ ಅದ್ದೂರಿಯಾಗಿ ಆಚರಿಸಲಾಯಿತು. ಈ ಸಂದರ್ಭದಲ್ಲಿ ಸೇನೆಯಲ್ಲಿ ಸೇವೆ ಸಲ್ಲಿಸಿದ ಒಂಬತ್ತು ಮಂದಿ ಸೈನಿಕರನ್ನು ಅಭಿನಂದಿಸಿ ಗೌರವಿಸಲಾಯಿತು.
ಗೌರವ ಸ್ವೀಕರಿಸಿದ ಸೈನಿಕರು: ಭಾರತೀಯ ಭೂ ಸೇನೆಯ ನೈನಾನ್ ಓಲಿಕಲ್, ಭಾರತೀಯ ನೌಕಾ ಪಡೆ, ಜೋನ್ ಕಾರ್ಮಲ್ ಭವನ್, ಬೇಬಿ ಮಟ್ಟಮ್, ಅಲೆಕ್ಸ್ ಚೆಛಬಿತ್ತಾನಮ್, ಟೋಮಿ ಚುಂಡಯಿಲ್, ಮತ್ತಚ್ಚನ್ ವಾಯಪ್ಪಳ್ಳಿ, ವಿನೋದ್ ಎ.ಜೆ.,ಭಾರತೀಯ ವಾಯು ಸೇನೆ ಸಿ.ಆರ್.ಪಿ.ಎಫ್, ಲಿಸಿ ಡೊಮಿನಿಕ್, ಅನ್ನಮ್ಮ ಯೇಸು ದಾಸ್, ಆರ್ ಪಿ ಎಫ್ ಗಡಿ ರಕ್ಷಣಾ ಪಡೆ ಕಮಾಂಡೆಂಟ್.
ಸಮಾರಂಭದ ವೇಳೆ ಸಾರ್ವಜನಿಕರು ಸೈನಿಕರಿಗೆ ಗೌರವ ಸಲ್ಲಿಸಿದರು. ಯುದ್ಧದಲ್ಲಿ ಮೃತಪಟ್ಟ ಸೈನಿಕರಿಗಾಗಿ ಪ್ರಾರ್ಥನೆ ಸಲ್ಲಿಸಲಾಯಿತು. ಧರ್ಮ ಗುರು ವಂದನಿಯ ಫಾ.ಶಾಜಿ ಮಾತ್ಯು ಅವರು ಸೈನಿಕರ ಸೇವೆಯನ್ನು ಮುಕ್ತ ಕಂಠದಿಂದ ಪ್ರಶಂಸಿಸಿದರು. ಪುತ್ತೂರು ಧರ್ಮಾಧ್ಯಕ್ಷ ಗೀವರ್ಗಿಸ್ ಮಾರ್ ಮಕಾರಿಯೋಸ್ ಅವರು ಸೈನಿಕರನ್ನು ಶಾಲು ಹೊದಿಸಿ ಸನ್ಮಾನಿಸಿದರು.
ಚರ್ಚ್ ಪಾಲನಾ ಸಮಿತಿಯ ಅಲೆಕ್ಸ್, ಜೋಬಿನ್, ರೆ. ಫಾ. ಕೈಪನಡ್ಕ, ರೆ. ಫಾ. ಬಿಜು ಜೋನ್ ಕುನ್ನ ತೇತ್ತ್, ಫಾ. ನೋಮಿಸ್, ಕೆ.ಎಸ್.ಎಂ.ಸಿ.ಯ ಅಧ್ಯಕ್ಷ ಶಿಬು ಪನಚಿಕ್ಕಲ್, ರಂಜನ್ ರಾಯಲ್ಸ್, ಬಿನಿಶ್ ರೊಯ್ ಕೊಳಂಗರಾತ್ತ್ ಮೊದಲಾದವರು ಸಭಾ ಕಾರ್ಯಕ್ರಮದಲ್ಲಿ ಭಾಗವಹಿಸಿದರು.