ಚಾರ್ಮಾಡಿ: ರಾಷ್ಟ್ರೀಯ ಹೆದ್ದಾರಿ ಚಾರ್ಮಾಡಿ ಘಾಟಿಯ ಕೆಲಭಾಗಗಳಲ್ಲಿ ಜು.26ರಂದು ರಾತ್ರಿ ಕುಸಿತವುಂಟಾಗಿ ಸಂಚಾರಕ್ಕೆ ಅಡ್ಡಿಯಾಗಿತ್ತು. ಆದರೆ ರಾತ್ರಿಯೇ ರಾಷ್ಟ್ರೀಯ ಹೆದ್ದಾರಿ ಇಲಾಖೆ ಇದನ್ನು ಸರಿಪಡಿಸಲು ಕಾರ್ಯಾರಂಭಿಸಿತ್ತು.
ಇಂದು ಜು.27ರಂದು ಚಾರ್ಮಾಡಿಯ ಆರು ಮತ್ತು ಏಳನೇ ತಿರುವಿನ ಮಧ್ಯೆ ಮತ್ತು ಹನ್ನೊಂದನೇ ತಿರುವಿನ ಸಮೀಪ ಆಗಿರುವ ಕುಸಿತದಿಂದಾಗಿ ಬಿದ್ದು ಮಣ್ಣು ತೆರವುಗೊಳಿಸಲಾಗಿದೆ.
ಇದನ್ನು ಬೆಳ್ತಂಗಡಿಯ ತಹಶೀಲ್ದಾರ್ ಪೃಥ್ವಿ ಸಾನಿಕಂ ಭೇಟಿ ನೀಡಿ ಪರಿಶೀಲನೆ ಮಾಡಿದರು.
ರಾಷ್ಟ್ರೀಯ ಹೆದ್ದಾರಿ ಇಲಾಖೆಯ ಎಕ್ಸಿಕ್ಯುಟಿವ್ ಇಂಜಿನಿಯರ್ ಶಿವಪ್ರಸಾದ್ ಅಜಿಲರನ್ನು ಸುದ್ದಿ ಸಂಪರ್ಕಿಸಿದಾಗ ಅವರು ಲಘು ವಾಹನಗಳ ಓಡಾಟಕ್ಕೆ ಯಾವುದೇ ತೊಂದರೆಯಿಲ್ಲ ಎಂದು ತಿಳಿಸಿದ್ದಾರೆ.