Site icon Suddi Belthangady

ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ ಕೊಕ್ಕಡದ ಮಹಿಳೆಗೆ ರೂ 1.50ಲಕ್ಷ ವಂಚನೆ

ಕೊಕ್ಕಡ: ಅಪರಿಚಿತ ವ್ಯಕ್ತಿ ಬ್ಯಾಂಕ್ ಅಧಿಕಾರಿ ಎಂದು ನಂಬಿಸಿ, ಓ.ಟಿ.ಪಿ ಪಡೆದು ಮಹಿಳೆಯೊವ೯ರಿಗೆ ರೂ.1.50 ಲಕ್ಷ ವಂಚಿಸಿದ ಪ್ರಕರಣ ಜು.26ರಂದು ವರದಿಯಾಗಿದೆ.

ಕೊಕ್ಕಡ ಗಾಣಗಿರಿ ಸುಶೀಲ ಅವರ ಬ್ಯಾಂಕ್ ಖಾತೆಯಿಂದ ರೂ1.50 ಲಕ್ಷವನ್ನು ಅಪರಿಚಿತ ವ್ಯಕ್ತಿ ಎಗರಿಸಿದ್ದಾನೆ.ಸುಶೀಲರವರು ಕೊಕ್ಕಡ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿದ್ದು , ಎಟಿಎಂಗಾಗಿ ಅಪ್ಲಿಕೇಶನ್ ಹಾಕಿದ್ದು 3-4 ದಿನದ ಹಿಂದೆ ಎಟಿಎಂ ಕಾರ್ಡ್ ಬಂದಿತ್ತು. ಜು.26ರಂದು ಬೆಳಗ್ಗೆ ಅಪರಿಚಿತ ವ್ಯಕ್ತಿಯೊಬ್ಬರು ಸುಶೀಲ ಅವರಿಗೆ ಫೋನ್ ಮಾಡಿ ನಾನು ಬ್ಯಾಂಕ್ ಅಧಿಕಾರಿ ಎಂದು ಪರಿಚಯಿಸಿಕೊಂಡು ನಂಬಿಸಿ, ನಂತರ ಫೋನ್ ಮಾಡಿ ನಿಮಗೆ ಒಟಿಪಿ ಬಂದಿದೆ ನಂಬರ್ ಹೇಳಿ ಎಂದರು.

ಅದರಂತೆ ಓಟಿಪಿ ನಂಬರ್ ಕೊಟ್ಟ ಸ್ವಲ್ಪ ಸಮಯದ ನಂತರ ಸುಶೀಲ ಅವರ ಖಾತೆಯಿಂದ ರೂ. 1.50 ಲಕ್ಷ ಡ್ರಾ ಆಗಿರುವುದು ಕಂಡು ಬಂದಿದೆ.ಕೊಕ್ಕಡ ಕೆನರಾ ಬ್ಯಾಂಕ್ ನಲ್ಲಿ ಖಾತೆ ಹೊಂದಿರುವ ಹಲವಾರು ಗ್ರಾಹಕರು ಪದೇ ಪದೇ ಈ ರೀತಿಯ ಮೋಸಕ್ಕೆ ಬಲಿಯಾಗಿದ್ದಾರೆ.ಈ ಬಗ್ಗೆ ಅಧಿಕಾರಿ ವರ್ಗದವರು ಎಚ್ಚೆತ್ತುಕೊಳ್ಳಬೇಕಾಗಿದೆ ಎಂದು ಸಾರ್ವಜನಿಕರು ಒತ್ತಾಯಿಸುತ್ತಿದ್ದಾರೆ.

Exit mobile version