Site icon Suddi Belthangady

ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಬೆಳ್ತಂಗಡಿ ಯುವ ಮೋರ್ಚಾ ವತಿಯಿಂದ ಗುರುವಾಯನಕೆರೆ ಹುತಾತ್ಮ ಯೋಧ ಏಕನಾಥ್ ಶೆಟ್ಟಿ ಇವರ ಪ್ರತಿಮೆಗೆ ಮಾಲಾರ್ಪಣೆ, ನುಡಿ ನಮನ

ಗುರುವಾಯನಕೆರೆ: ಕಾರ್ಗಿಲ್ ವಿಜಯ ದಿವಸ್ ಅಂಗವಾಗಿ ಬೆಳ್ತಂಗಡಿ ಯುವ ಮೋರ್ಚಾ ವತಿಯಿಂದ ಜುಲೈ 26 ರಂದು ಗುರುವಾಯನಕೆರೆ ಹುತಾತ್ಮ ಯೋಧ ಏಕನಾಥ್ ಶೆಟ್ಟಿ ಇವರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನುಡಿ ನಮನ ಸಲ್ಲಿಸಲಾಯಿತು.

ಈ ಸಂದರ್ಭದಲ್ಲಿ ಮಂಡಲ ಯುವ ಮೋರ್ಚಾ ಅಧ್ಯಕ್ಷ ಶಶಿರಾಜ್ ಶೆಟ್ಟಿ, ಜಿಲ್ಲಾ ಪ್ರಧಾನ ಕಾರ್ಯದರ್ಶಿ ಉಮೇಶ್ ಕುಲಾಲ್, ತಾಲೂಕು ಪ್ರಧಾನ ಕಾರ್ಯದರ್ಶಿ ವಿನೀತ್ ಕೋಟ್ಯಾನ್, ಜಯಪ್ರಸಾದ್ ಕಡಮ್ಮಾಜೆ ಹಾಗೂ ಪದಾಧಿಕಾರಿಗಳು ಕಾರ್ಯಕಾರಿ ಸಮಿತಿ ಸದಸ್ಯರು ಉಪಸ್ಥಿತರಿದ್ದರು.

Exit mobile version