Site icon Suddi Belthangady

ನೆರಿಯ: ರಾತ್ರಿ ಸುರಿದ ಗಾಳಿ ಮಳೆಗೆ ಮನೆಗಳಿಗೆ, ವಿದ್ಯುತ್ ಕಂಬಗಳಿಗೆ ಹಾನಿ- ಜನಜೀವನ ಅಸ್ತವ್ಯಸ್ತ, ಘಟನಾ ಸ್ಥಳಕ್ಕೆ ಅಧಿಕಾರಿಗಳ ಭೇಟಿ

ನೆರಿಯ: ನೆರಿಯ ಗ್ರಾಮದಲ್ಲಿ ಜು.25ರಂದು ರಾತ್ರಿ ಸುರಿದ ಭಾರಿ ಗಾಳಿ ಮಳೆಗೆ ಗ್ರಾಮದ ಹಣಿಯೂರು, ಪಾದೆಗುಡ್ಡೆ, ಬಯಲು ಕುಕ್ಕೆಜಾಲು, ನೆಕ್ಕರೆ, ಕೋಲೋಡಿ ಅನೇಕ ಭಾಗದಲ್ಲಿ ಮನೆಗಳಿಗೆ ಮರ ಬಿದ್ದು ಹಾನಿ ಸಂಭವಿಸಿದೆ ಹಾಗೂ ವಿದ್ಯುತ್ ಕಂಬಗಳು, ಮರಗಳು ರಸ್ತೆಗೆ ಬಿದ್ದು ವಾಹನ ಸಂಚಾರಕ್ಕೆ ಅಡ್ಡಿ ಉಂಟಾಗಿ ಜನರ ಜೀವನ ಅಸ್ಥವ್ಯಸ್ತಗೊಂಡಿದೆ.

ಘಟನಾ ಸ್ಥಳಕ್ಕೆ ಅಧಿಕಾರಿಗಳು ಮತ್ತು ಶೌರ್ಯ ವಿಪತ್ತು ತಂಡ ಭೇಟಿ ನೀಡಿದ್ದಾರೆ. ಶಾಲಾ ಮಕ್ಕಳಿಗೆ ರಜೆಯನ್ನು ಘೋಷಿಸಿದ್ದಾರೆ.

Exit mobile version