ಮಡಂತ್ಯಾರು: ಬಂಗೇರಕಟ್ಟೆ ರಸ್ತೆಯಲ್ಲಿ ಮಳೆ ನೀರು ರಸ್ತೆಯಲ್ಲಿ ಸಂಚರಿಸುತ್ತಿವೆ. ಬಂಗೇರಕಟ್ಟೆಯಿಂದ ಮಡಂತ್ಯಾರಿನವರೆಗೆ ರಸ್ತೆಯ ಬದಿ ಸರಿಯಾದ ಚರಂಡಿಯ ವ್ಯವಸ್ಥೆ ಇಲ್ಲದೆ ರಸ್ತೆಯಲ್ಲಿ ನೀರು ಹರಿಯುತ್ತಿದೆ.
ಸಾರ್ವಜನಿಕರಿಗೂ, ಶಾಲಾ ಮಕ್ಕಳಿಗೂ ನಡೆದುಕೊಂಡು ಹೋದಾಗ ಕೆಸರಿನ ಅಭಿಷೇಕವಾಗುತ್ತಿದೆ. ಮಾರಿಗುಡಿ ಸಮೀಪ ಇತ್ತೀಚಿಗೆ ಆಟೋ ಚಾಲಕ ಮಾಲಕರ ಸಂಘದವರು ಶ್ರಮದಾನದಲ್ಲಿ ಚಿಕ್ಕ ಚಿಕ್ಕ ಚರಂಡಿಗಳನ್ನು ಸರಿಪಡಿಸಿದರೂ ದೊಡ್ಡ ಚರಂಡಿಗಳ ಅವಶ್ಯಕತೆ ಇರುವುದರಿಂದ ಸಂಬಂಧಪಟ್ಟ ಗ್ರಾಮ ಪಂಚಾಯತಿ ಈ ಬಗ್ಗೆ ತಕ್ಷಣ ಕ್ರಮ ಕೈಗೊಳ್ಳುವಂತೆ ಚಾಲಕರು ಹಾಗೂ ಸಾರ್ವಜನಿಕರು ಆಗ್ರಹಿಸಿದ್ದಾರೆ.