Site icon Suddi Belthangady

ಕಳೆಂಜ: ಶ್ರೀ ಸದಾಶಿವೇಶ್ವರ ದೇವಸ್ಥಾನದ ಶ್ರೀ ಶಾಸ್ತರ ಗುಡಿಯ ನೂತನ ಗರ್ಭಗುಡಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ.3ಲಕ್ಷ ಅನುದಾನ

ಕಳೆಂಜ: ಶ್ರೀ ಸದಾಶಿವೇಶ್ವರ ದೇವಸ್ಥಾನದ ಶ್ರೀ ಶಾಸ್ತರ ಗುಡಿಯ ನೂತನ ಗರ್ಭಗುಡಿಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ರೂ 3ಲಕ್ಷ ಅನುದಾನವನ್ನು ಜು.25ರಂದು ಚೆಕ್ ಮೂಲಕ ನೀಡಿರುತ್ತಾರೆ.

ಚೆಕ್ ನ್ನು ಶ್ರೀ ಕ್ಷೇತ್ರ ಧರ್ಮಸ್ಥಳದ ಎಸ್.ಕೆ.ಡಿ.ಆ‌ರ್.ಡಿ.ಪಿ ಯ ಬೆಳ್ತಂಗಡಿ ತಾಲೂಕಿನ ಯೋಜನಾಧಿಕಾರಿ ಸುರೇಂದ್ರ, ದೇವಸ್ಥಾನದ ಅಧ್ಯಕ್ಷ ಶ್ರೀಧ‌ರ್ ರಾವ್‌ ಹಸ್ತಾಂತರಿಸಿದರು.

ಈ ಸಂದರ್ಭದಲ್ಲಿ ಧರ್ಮಸ್ಥಳ ವಲದ ಮೇಲ್ವಿಚಾರಕರಾದ ರವೀಂದ್ರ, ಕುಮಾರಿ ಭವಾನಿ ಸೇವಾ ಪ್ರತಿನಿಧಿ, ಒಕ್ಕೂಟದ ಅಧ್ಯಕ್ಷರು ಬಾಲಕೃಷ್ಣ ದೇವಾಡಿಗ, ದೇವಸ್ಥಾನದ ಕಾರ್ಯದರ್ಶಿ ಕುಸುಮಾಕರ, ಸಂತೋಷ್ ಜೈನ, ಸವಿತಾ, ವಿಜಯ, ಶಿನಪ್ಪ ಗೌಡ, ಕೆಸವ ಗೌಡ ಮಲ್ಲಜಾಲು, ರಮ್ಯಾ ಮಲ್ಲಜಾಲು, ರುಕ್ಮಯಾ ಗೌಡ ಬರಮೇಲು, ಬಾಲಣ್ಣ ಗೌಡ ಬದಿಮಾರು, ರಾಮಚಂದ್ರ ಗೌಡ ಮಲ್ಲಜಾಲು, ನೀಲಯ್ಯ ಗೌಡ ಮುಡಾಯಿಮಜಲು, ಗೋವಿಂದ ಗೌಡ ಕೊಳಂಬೆ ಮತ್ತು ದೇವಸ್ಥಾನದ ಆಡಳಿತ ಮಂಡಳಿ ಪಧಿಕಾರಿಗಳು ಹಾಗೂ ಊರ ಭಕ್ತರು ಉಪಸ್ಥಿತರಿದ್ದರು.

Exit mobile version