Site icon Suddi Belthangady

ಜು.28: ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಕೋಟೆಬಾಗಿಲು ಮೂಡಬಿದ್ರೆಯಲ್ಲಿ ಆಟಿದ ಕೂಟ-2024 ಕಾರ್ಯಕ್ರಮ

ಮರೋಡಿ: ದ.ಕ ಜಿಲ್ಲಾ ಹೆಗ್ಗಡೆ ಸಮಾಜ ಸಂಘ ಕೋಟೆಬಾಗಿಲು ಮೂಡಬಿದ್ರೆ ಮತ್ತು ಮೂಡಬಿದ್ರೆ ಕೋಟೆಬಾಗಿಲು ಶ್ರೀ ವೀರ ಮಾರುತಿ ದೇವಸ್ಥಾನ ಇದರ ಆಶ್ರಯದಲ್ಲಿ ಆಟಿದ ಕೂಟ-2024 ವೀರಮಾರುತಿ ಕಲಾ ಮಂದಿರ ಕೋಟೆಬಾಗಿಲು ವೀರಮಾರುತಿ ದೇವಸ್ಥಾನ ವಠಾರದಲ್ಲಿ ಜು.28ರಂದು ನಡೆಯಲಿದೆ.

ಗುಂಪು ಗಾಯನ ಕಾರ್ಯಕ್ರಮ, ತುಳು ಜಾನಪದ ಹಾಡುವವರಿಗೆ ಮಾತ್ರ ಅವಕಾಶ, ಒಂದು ಗುಂಪಿನಲ್ಲಿ ಕನಿಷ್ಟ 4 ಮಂದಿ ಇರಬೇಕು.

ಕೆಲವೊಂದು ವೈಯುಕ್ತಿಕ ಸ್ಪರ್ಧೆಗಳು ಇರುತ್ತವೆ.60 ವರ್ಷ ಮೇಲ್ಪಟ್ಟವರು ವೈಯುಕ್ತಿಕ ಗಾಯನವನ್ನು ಹಾಡಬಹುದು.ತುಳು ಪಾರ್ದನ, ತುಳು-ಕನ್ನಡ ಜಾನಪದ ಹಾಡು, ನೃತ್ಯ ಕಾರ್ಯಕ್ರಮ, ತುಳು-ಕನ್ನಡ ಜಾನಪದ ನೃತ್ಯ ಕಾರ್ಯಕ್ರಮ,ಕನಿಷ್ಟ ಒಂದು ಗುಂಪಿನಲ್ಲಿ 4 ಮಂದಿ ಇರಬೇಕು, ಇತರ ಕೆಲವೊಂದು ವಿವಿಧ ವಿಭಾಗಳಲ್ಲಿ ಸ್ಪರ್ಧೆಗಳನ್ನು ನಡೆಸಲಾಗುವುದು.

ವಿಶೇಷ ಸೂಚನೆ: ಗುಂಪು ಗಾಯನ ಕಾರ್ಯಕ್ರಮ ಮತ್ತು ಗುಂಪು ನೃತ್ಯ ಕಾರ್ಯಕ್ರಮ ನೀಡುವವರು ಜು.25ರ ಮುಂಚಿತವಾಗಿ ಅಧ್ಯಕ್ಷರು ಮತ್ತು ಕಾರ್ಯದರ್ಶಿಯವರಿಗೆ ನೀಡುವಂತೆ ವಿನಂತಿಸಿಕೊಳ್ಳಲಾಗಿದೆ.ಈ ಕಾರ್ಯಕ್ರಮಕ್ಕೆ ಹೆಚ್ಚಿನ ಸಂಖ್ಯೆಯಲ್ಲಿ ಸಮಾಜ ಬಂಧುಗಳು ಆಗಮಿಸಿ ಕಾರ್ಯಕ್ರಮ ಯಶಸ್ವಿಗೊಳಿಸುವಂತೆ ಹೆಗ್ಗಡೆ ಸಮಾಜ ಸಂಘದ ಅಧ್ಯಕ್ಷ ನವೀನ್ ಹೆಗ್ಡೆ ತಿಳಿಸಿದ್ದಾರೆ.

Exit mobile version