Site icon Suddi Belthangady

ನಿಟ್ಟಡೆ: ಕುಂಭಶ್ರೀ ಪ.ಪೂ. ಕಾಲೇಜಿನ ವಿದ್ಯಾರ್ಥಿಗಳಿಂದ ಕೈಗಾರಿಕಾ ಘಟಕಕ್ಕೆ ಭೇಟಿ

ನಿಟ್ಟಡೆ: ಕುಂಭಶ್ರೀ ಪದವಿ ಪೂರ್ವ ಕಾಲೇಜಿನ ವಾಣಿಜ್ಯ ವಿಭಾಗದ ವಿದ್ಯಾರ್ಥಿಗಳಿಗೆ ಪ್ರಾಯೋಗಿಕ ಅನುಭವವನ್ನು ಪಡೆಯಲು ಕೈಗಾರಿಕಾ ಘಟಕಗಳಿಗೆ ಜು.23ರಂದು ಭೇಟಿಯನ್ನು ನೀಡಿದರು.

ಗರ್ಡಾಡಿಯ ದಿಯಾ ಇಂಪ್ರೆಶನ್ಸ್ ಪುಸ್ತಕ ತಯಾರಿಕಾ ಘಟಕಕ್ಕೆ ಭೇಟಿ ನೀಡಿ ಕಾಗದ ತಯಾರಿಕೆಯಿಂದ ಬರೆಯಲು ಬೇಕಾದ ವಿವಿಧ ಪುಸ್ತಕ, ಪೇಪರ್ ಶೀಟ್ ಗಳ ತಯಾರಿಯನ್ನು ವಿವಿಧ ಹಂತಗಳಲ್ಲಿ ಘಟಕದ ಆಯೋಜಕರು ವಿವರವಾದ ಮಾಹಿತಿಯನ್ನು ನೀಡಿದರು.

ಉಜಿರೆಯಲ್ಲಿರುವ ಧರ್ಮಸ್ಥಳ ಸಿರಿ ಗ್ರಾಮೋದ್ಯೋಗ ಸಂಸ್ಥೆಯ ಘಟಕಕ್ಕೆ ಭೇಟಿ ನೀಡಿದಾಗ ವಸ್ತ್ರ ವಿನ್ಯಾಸದ ವಿವಿಧ ಮಜಲುಗಳನ್ನು ವಿವರಿಸಿ, ಒಂದು ಸಂಸ್ಥೆಯ ಆರಂಭದ ಉದ್ದೇಶ, ಲಾಭ ನಷ್ಟಗಳ ಪರಿಗಣನೆ, ಆರ್ಥಿಕ ಉತ್ತೇಜನ, ಉತ್ಪಾದಕರಿಗೆ ಯಾವ ರೀತಿಯಲ್ಲಿ ಪ್ರೋತ್ಸಾಹಿಸುವುದು, ವ್ಯವಹಾರದ ಸೂಕ್ಷ್ಮ ಅನುಭವಗಳನ್ನು ವಿದ್ಯಾರ್ಥಿಗಳು ಸಂಸ್ಥೆಯ ನಿರ್ದೇಶಕ ಯತೀಶ್ ಶೆಟ್ಟಿ ಇವರಿಂದ ಮಾಹಿತಿಯನ್ನು ಪಡೆದುಕೊಂಡರು.

ಒಂದು ದಿನದ ಪ್ರಾಯೋಗಿಕ ಅಭ್ಯಾಸವನ್ನು ಕುಂಭಶ್ರೀ ವಿದ್ಯಾ ಸಂಸ್ಥೆಯ ಸಂಚಾಲಕರ ಮಾರ್ಗದರ್ಶನದಲ್ಲಿ ಆಡಳಿತಾಧಿಕಾರಿಯವರ ಪ್ರೋತ್ಸಾಹದಿಂದ ಪ್ರಾಂಶುಪಾಲರು ಮತ್ತು ಉಪನ್ಯಾಸಕರು ಯಶಸ್ವಿಯಾಗಿ ನಡೆಸಿದರು.”ಕೋಶ ಓದು ದೇಶ ಸುತ್ತು” ಎಂಬಂತೆ ವಿದ್ಯಾರ್ಥಿಗಳು ವಿದ್ಯಾಭ್ಯಾಸದಲ್ಲಿ ವಿಶೇಷ ಅನುಭವವನ್ನು ಪಡೆದರು.

Exit mobile version