ಕೊಕ್ಕಡ: ಕೌಕ್ರಾಡಿ ಗ್ರಾಮದ ಸೌತಡ್ಕ ದ್ವಾರದ ಬಳಿ ಹಾದು ಹೋಗುವ ರಾಜ್ಯ ಹೆದ್ದಾರಿಯಲ್ಲಿ ಅಸಮರ್ಪಕ ಮೋರಿ ಇದ್ದು ನೀರು ಸರಾಗವಾಗಿ ಹರಿದು ಹೋಗಲು ಆಗದೆ ರಸ್ತೆ ತುಂಬ ನೀರು ನಿಂತು ಅನೇಕ ಅಪಘಾತಗಳಿಗೆ ಎಡೆ ಮಾಡಿ ಕೊಡುತ್ತಿತ್ತು ಸುದ್ದಿ ಬಿಡುಗಡೆ ಈ ಬಗ್ಗೆ ವರದಿ ಬಿತ್ತರಿಸಿದಾಗ ಎಚೆತ್ತ ಪಿಡಬ್ಲ್ಯೂಡಿ ಇಲಾಖೆ ನೂತನ ಮೋರಿ ಅಳವಡಿಸಿ ಹೂಳನ್ನು ತೆಗೆದು ಸರಾಗವಾಗಿ ನೀರು ಹರಿಯುವಂತೆ ಮಾಡಿದ್ದು ಇದರಿಂದ ನಡೆಯುತ್ತಿದ್ದ ಅಪಘಾತವನ್ನು ತಪ್ಪಿಸಿದಂತಾಗಿದೆ.