Site icon Suddi Belthangady

ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘ ಇದರ ಯೂನಿಯನ್ ಉದ್ಘಾಟನೆ- ಕಾರ್ಮಿಕರ ಸಮಾವೇಶ ಹಾಗೂ ಬಿ.ಎಂ.ಎಸ್ ಸ್ಥಾಪನ ದಿನಾಚರಣೆ

ಉಜಿರೆ: ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲಾ ರಬ್ಬರ್ ಟ್ಯಾಪರ್ ಮತ್ತು ಕೃಷಿ ಮಜ್ದೂರ್ ಸಂಘ ಇದರ ಯೂನಿಯನ್ ಉದ್ಘಾಟನೆ ಮತ್ತು ಕಾರ್ಮಿಕರ ಸಮಾವೇಶ ಹಾಗೂ ಬಿ.ಎಂ.ಎಸ್ ಸ್ಥಾಪನ ದಿನಾಚರಣೆ ಕಾರ್ಯಕ್ರಮವು ಜುಲೈ 23ರಂದು ಶಾರದ ಮಂಟಪ ಶ್ರೀ ಜನಾರ್ದನ ದೇವಸ್ಥಾನದ ಬಳಿ ನಡೆಯಿತು.ರಬ್ಬರ್ ಬೋರ್ಡ್ ಭಾರತ ಸರ್ಕಾರ ನಿರ್ದೇಶಕರು ಆಗಿರುವ ಕೇಶವ ಭಟ್ ಮುಳಿಯ ಉದ್ಘಾಟಿಸಿದರು.

ಕಾರ್ಯಕ್ರಮದ ಅಧ್ಯಕ್ಷತೆಯನ್ನು ಅಧ್ಯಕ್ಷರು ರಬ್ಬರ್ ಟ್ಯಾಪರ್ ಮಜ್ದೂರ್ ಸಂಘದ ಜಿಲ್ಲಾಧ್ಯಕ್ಷ ಮತ್ತು ವಕೀಲರು ಆಗಿರುವ ಅನಿಲ್ ಕುಮಾರ್ ವಹಿಸಿದ್ದರು.

ಮುಖ್ಯ ಅತಿಥಿಗಳಾಗಿ ಬೆಳ್ತಂಗಡಿ ತಾಲೂಕು ರಬ್ಬರ್ ಬೆಳೆಗಾರರ ಮಾರಾಟ ಮತ್ತು ಸಂಸ್ಕರಣ ಸಹಕಾರಿ ಸಂಘದ ಉಪಾಧ್ಯಕ್ಷರಾದ ಅನಂತ್ ಭಟ್ ಮಚ್ಚಿಮಲೆ,ರಬ್ಬರ್ ಬೆಳೆ ಅಭಿವೃದ್ಧಿ ಅಧಿಕಾರಿ ರೋಶಿನಿ, ಉಜಿರೆ ಕೆನರಾ ಬ್ಯಾಂಕ್ ಮುಖ್ಯ ಪ್ರಬಂಧಕ ರಾದ ಜಯಂತ, ರಾಷ್ಟ್ರೀಯ ಸ್ವಯಂಸೇವಕ ಸಂಘದ ಪ್ರಚಾರ ಪ್ರಮುಖ್ ರಾದ ಭರತ್ ರಾಜ್ ಮಂಗಳೂರು, ಬೆಳ್ತಂಗಡಿ ಅಮೂಲ್ಯ ಸಾಕ್ಷರತ ಕೇಂದ್ರದ ಆರ್ಥಿಕ ಸಮಾಲೋಚಕಿ ಉಷಾ ನಾಯಕ್, ರಬ್ಬರ್ ಟ್ಯಾಪಿಂಗ್ ನಿವೃತ್ತ ತರಬೇತಿ ಶಿಕ್ಷಕ ರಾಘವನ್ ಮಾಸ್ಟರ್, ಭಾರತೀಯ ಮಜ್ದೂರ್ ಸಂಘದ ಬೆಳ್ತಂಗಡಿ ತಾಲೂಕು ಸಮಿತಿ ಅಧ್ಯಕ್ಷರಾದ ಉದಯ ಬಿ.ಕೆ,ಬೆಳ್ತಂಗಡಿ ತಾಲೂಕು ರಬ್ಬರ್ ಟ್ಯಾಪರ್ ಅಧ್ಯಕ್ಷರಾದ ಹರೀಶ್ ಜೆ.ಕೆ, ಸುಳ್ಯ ತಾಲೂಕು ಸಮಿತಿ ರಬ್ಬರ್ ಟ್ಯಾಪರ್ ಅಧ್ಯಕ್ಷರಾದ ಶಶಿಕುಮಾರ್, ಪ್ರಧಾನ ಕಾರ್ಯದರ್ಶಿ ನಾಗರಾಜ ಮಾಚಾರು ಉಪಸ್ಥಿತರಿದ್ದರು
ಕುಮಾರಿ ಅಭಿಶ್ರೀ ಪ್ರಾರ್ಥನೆಯನ್ನು ಮಾಡಿದರು.

ಭಾರತೀಯ ಮಜ್ದೂರು ಸಂಘದ ರಾಜ್ಯ ಕಾರ್ಯದರ್ಶಿ ಜಯರಾಜ್ ಸಾಲಿಯಾನ್ ಸ್ವಾಗತಿಸಿ, ಪ್ರಾಸ್ತಾವಿಕವಾಗಿ ಮಾತನಾಡಿದರು.

Exit mobile version