ಬೆಳ್ತಂಗಡಿ: ಬೆಳ್ತಂಗಡಿ ಮಹಿಳಾ ವೃಂದದಲ್ಲಿ ಜು.21ರಂದು ಆಟಿಡೊಂಜಿ ಕಾರ್ಯಕ್ರಮ ನಡೆಯಿತು. ತುಳುನಾಡ ಸಂಸ್ಕೃತಿಯಂತೆ ಚೆನ್ನೆ ಮನೆ ಆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.
ಅಧ್ಯಕ್ಷತೆಯನ್ನು ಮಹಿಳಾ ವೃಂದದ ಅಧ್ಯಕ್ಷೆ ನೇತ್ರಾ ಅಶೋಕ್ ವಹಿಸಿದ್ದರು. ಹಿರಿಯ ಸದಸ್ಯರಾದ ಸಂಧ್ಯಾ ಪಾಲಂದೆ, ಗೌರಿ ಫನಿಕ್ಕರ್ ಆಟಿ ಆಚರಣೆ, ಸಂಪ್ರದಾಯ,ಆಟಿ ತಿಂಗಳ ತಿಂಡಿ ತಿನಸು ಕುರಿತು ಮಾತನಾಡಿದರು.ವೀಣಾ ವಿ. ಕುಮಾರ್ ಪ್ರಾರ್ಥನೆ ಹಾಡಿದರು.
ಹೆಚ್ಚಿನ ಖಾದ್ಯ ತಯಾರಿ ಮಾಡಿ ತಂದ ಲಾವಣ್ಯ ಮತ್ತು ಉಮಾ ರಾವ್ ರವರಿಗೆ ಪ್ರಥಮ, ದ್ವಿತೀಯ ಬಹುಮಾನ ನೀಡಿ ಗೌರವಿಸಲಾಯಿತು. ರೇಖಾ ಸುಧೀರ್ ಸ್ವಾಗತಿಸಿ, ರಶ್ಮಿ ಪಟವರ್ಧನ್ ಕಾರ್ಯಕ್ರಮ ನಿರೂಪಿಸಿ, ಕಾರ್ಯದರ್ಶಿ ಪ್ರೀತಿ ರತೀಶ್ ರಾವ್ ವಂದಿಸಿದರು.