Site icon Suddi Belthangady

ಎಕ್ಸೆಲ್ ನಲ್ಲಿ ಭಾರತೀಯ ಜೈನ್ ಮಿಲನ್ ಸಭೆ

ಗುರುವಾಯನಕೆರೆ: ಅಹಿಂಸಾ ಪರಮೋ ಧರ್ಮ ಎನ್ನುವುದು ಜಗತ್ತಿಗೆ ಜೈನ ಧರ್ಮ ಸಾರಿದ ಉದಾತ್ತ ಚಿಂತನೆಯಾಗಿದೆ. ಭಗವಾನ್ ಮಹಾವೀರರ ಸಂದೇಶ ಜೈನ ಧರ್ಮದ ತಳಪಾಯವಾಗಿದ್ದು, ಜೈನತ್ವ ಎನ್ನುವುದು ಹುಟ್ಟಿನಿಂದ ನಿರ್ಧಾರವಾಗುವುದಿಲ್ಲ, ಆಚರಣೆಯಿಂದ ಬರುವಂಥದ್ದು ಎಂದು ಖ್ಯಾತವಾಗ್ಮಿ ಹಾಗೂ ಶಿಕ್ಷಕ ಅಜಿತ್ ಕುಮಾರ್ ಕೊಕ್ರಾಡಿ ಹೇಳಿದರು.

ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ವಲಯ 8ರ ಜುಲೈ ತಿಂಗಳ ಮಾಸಿಕ ಸಭೆಯಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಅವರು ಮಾತನಾಡಿದರು. ಗುರುವಾಯನ ಕೆರೆಯ ಎಕ್ಸೆಲ್ ಪದವಿ ಪೂರ್ವ ಕಾಲೇಜಿನಲ್ಲಿ ನಡೆದ ಸಭೆಯ ಅಧ್ಯಕ್ಷತೆಯನ್ನು ಭಾರತೀಯ ಜೈನ್ ಮಿಲನ್ ಬೆಳ್ತಂಗಡಿ ಇದರ ಅಧ್ಯಕ್ಷ ವೀರ್ ಡಾ.ನವೀನ್ ಕುಮಾರ್ ಜೈನ್ ವಹಿಸಿಕೊಂಡಿದ್ದರು. ಈ ಸಂದರ್ಭದಲ್ಲಿ ಜುಲೈ ತಿಂಗಳ ಮಾಸಿಕ ಸಭೆಯ ಆತಿಥ್ಯವನ್ನು ಅಚ್ಚುಕಟ್ಟಾಗಿ ನಿರ್ವಹಿಸಿ, ಅತ್ಯಂತ ಯಶಸ್ವಿಯಾಗಿ ಕಾರ್ಯಕ್ರಮವನ್ನು ನಡೆಸಿಕೊಟ್ಟ ಎಕ್ಸೆಲ್ ಪದವಿಪೂರ್ವ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ಇವರನ್ನು ಘಟಕದ ಹಿರಿಯ ನಿರ್ದೇಶಕ ವೀರ್ ಬಿ.ಸೋಮಶೇಖರ ಶೆಟ್ಟಿ ಅಭಿನಂದಿಸಿದರು.

ಭಾರತೀಯ ಜೈನ್ ಮಿಲನ್, ಬೆಳ್ತಂಗಡಿ ಘಟಕದ ಈ ಸಭೆಯಲ್ಲಿ ಭಾರತೀಯ ಜೈನ್ ಮಿಲನ್ ಬೆಳ್ತಂಗಡಿಯ ಎಲ್ಲಾ ಸದಸ್ಯರುಗಳು ಭಾಗವಹಿಸಿದ್ದರು. ಕಾರ್ಯಕ್ರಮಕ್ಕೆ ಆಗಮಿಸಿದ ಎಲ್ಲರನ್ನು ವೀರ್ ಶಾಂತಿರಾಜ್ ಜೈನ್ ಪಡಂಗಡಿ ಸ್ವಾಗತಿಸಿ, ಘಟಕದ ಖಜಾಂಚಿ ವೀರ್ ನಿಕಿತ್ ಕುಮಾರ್ ಜೈನ್ ಧನ್ಯವಾದಗೈದರು.

ಕಾರ್ಯಕ್ರಮದ ನಿರ್ವಹಣೆಯನ್ನು ಘಟಕದ ಕಾರ್ಯದರ್ಶಿಗಳಾದ ಸಂಪತ್ ಕುಮಾರ್ ಇವರು ನಿರ್ವಹಿಸಿದರು. ಕಾರ್ಯಕ್ರಮದಲ್ಲಿ ಎಕ್ಸೆಲ್ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿಗಳಿಂದ ಸುಮಧುರ ಗಾಯನ ನಡೆಯಿತು.

Exit mobile version