ಬೆಳಾಲು: ಬೆಳಾಲಿನಿಂದ ಮಾಯ-ನಾರ್ಯ ಮಾರ್ಗವಾಗಿ ಧರ್ಮಸ್ಥಳ ಸಂಪರ್ಕ ರಸ್ತೆ ಸಂಪೂರ್ಣ ಹೊಂಡ ಗುಂಡಿಗಳಿಂದ ಕೂಡಿದ್ದು ಬೆಳಾಲು ಮಾಯ ರಸ್ತೆಯಲ್ಲಿ ಪಾದಚಾರಿಗಳಿಗೆ, ಶಾಲಾ ಬಸ್ ಗಳು ಮತ್ತು ಸರಕಾರಿ ಬಸ್ ಸಂಚಾರಿಸದ ಸ್ಥಿತಿಯಲ್ಲಿದೆ.
ರಸ್ತೆಯ ಬದಿಯಲ್ಲಿ ಪೊದೆಗಳು ಬೆಳೆದು ಶಾಲಾ ಮಕ್ಕಳಿಗೆ ನಡೆದುಕೊಂಡು ಹೋಗಲು ಕಷ್ಟಕರವಾಗಿದೆ ರಸ್ತೆಯ ಬದಿಯಲ್ಲಿರುವ ಮರಗಳು ರಸ್ತೆಗೆ ಬಾಗಿಕೊಂಡಿದ್ದು ಅಪಾಯದ ಸ್ಥಿತಿಯಲ್ಲಿದೆ ಬೆಳಾಲು ಗ್ರಾಮ ಪಂಚಾಯತಿಗೆ ಮನವಿ ಕೊಟ್ಟು ಸಾಕಾಗಿದೆ, ಇನ್ನು ಕೂಡ ರಸ್ತೆ ಸರಿ ಪಡಿಸುವ ಗೋಜಿಗೆ ಹೋಗದ್ದು ದುರಾದ್ರಷ್ಟಕರ ಇಂದು ಒಂದು ಶಾಲಾ ಬಸ್ ನವರು ಆ ರಸ್ತೆಯಲ್ಲಿ ಬರಲು ಕಷ್ಟ ಸಾಧ್ಯ ಎಂದು ಬೆಳಾಲಿನಲ್ಲಿಯೇ ಮಕ್ಕಳನ್ನು ಇಳಿಸಿದ್ದಾರೆ.
ಆದಷ್ಟು ಬೇಗ ರಸ್ತೆಯನ್ನು ಸರಿಪಡಿಸಬೇಕು ಸರಕಾರಿ ಬಸ್ ಈ ರಸ್ತೆ ಮೂಲಕ ಸಂಚಾರ ಬಂದ್ ಮಾಡಿದರೆ ಶಾಲಾ ಮಕ್ಕಳು ರಸ್ತೆಯಲ್ಲಿ 3 ಕಿ.ಮೀ. ನಡೆಯುವ ಪರಿಸ್ಥಿತಿ ಬರಬವುದು ನಡೆದುಕೊಂಡು ಹೋಗಲು ಕೂಡ ಆಗದ ಸ್ಥಿತಿಯಲ್ಲಿ ಈ ರಸ್ತೆ ಇದೆ ಎಂದು ಆ ಪರಿಸರದ ಗ್ರಾಮಸ್ಥರು ಒತ್ತಾಯ ಮಾಡಿದ್ದಾರೆ.