Site icon Suddi Belthangady

ಗುರುವಾಯನಕೆರೆ: ಎಕ್ಸೆಲ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಸುಮಂತ್ ಕುಮಾರ್ ಜೈನ್ ರಿಗೆ ಆಮಂತ್ರಣ ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕಾರ

ಗುರುವಾಯನಕೆರೆ: ಗುರುವಾಯನಕೆರೆ ಪ್ರತಿಷ್ಠಿತ ಸಂಸ್ಥೆಯಾಗಿ ರಾಜ್ಯದಲ್ಲಿ ಹೆಸರು ಪಡೆದ ಎಕ್ಸೆಲ್ ಶಿಕ್ಷಣ ಸಂಸ್ಥೆ ಚಯರ್ ಮೆನ್ ಸುಮಂತ್ ಕುಮಾರ್ ಜೈನ್ ವರಿಗೆ ಆಮಂತ್ರಣ ಶಿಕ್ಷಣ ರತ್ನ ಪ್ರಶಸ್ತಿ ಪುರಸ್ಕಾರ ನೀಡಿ ಗೌರವಿಸಿದೆ.

ಜು 21ರಂದು ಧರ್ಮಸ್ಥಳ ನೇತ್ರಾವತಿ ಪ್ರಣವ್ ಸಭಾಂಗಣದಲ್ಲಿ ನಡೆದ ಪದಗ್ರಹಣ ಸಮಾರಂಭದಲ್ಲಿ ಈ ಪ್ರಶಸ್ತಿ ನೀಡಲಾಗಿದೆ.ಆಮಂತ್ರಣ ಪರಿವಾರ ಮತ್ತು ಆಮಂತ್ರಣ ಸಾಂಸ್ಕೃತಿಕ ಸಾಹಿತ್ಯ ವೇದಿಕೆ ಕರ್ನಾಟಕಹಾಗೂ ಶ್ರೀ ಸತ್ಯದೇವತೆ ದೈವಸ್ಥಾನ ಅಳದಂಗಡಿಸುವರ್ಣ ಸಾಂಸ್ಕೃತಿಕ ಪ್ರತಿಷ್ಠಾನ ಇವರ ಸಹಕಾರದೊಂದಿಗೆ ಅತೀ ಕಡಿಮೆ ಅವಧಿಯಲ್ಲಿ ರಾಜ್ಯದ ಉತ್ತಮ ಶಿಕ್ಷಣ ಸಂಸ್ಥೆಯಾಗಿ ಹೆಸರು ಪಡೆದ ಸಂಸ್ಥೆ ನಡೆಸುತ್ತಿರುವ ಎಲ್ಲರೊಂದಿಗೆ ಬೆರೆಯುವ ಸಾಂಸ್ಕೃತಿಕವಾಗಿ ಹಾಗೂ ಎಲ್ಲಾ ರಂಗದ ಕಾರ್ಯಕ್ರಮಗಳ ಆಯೋಜನೆಯೊಂದಿಗೆ ನಿಸ್ವಾರ್ಥ ಸೇವೆಯ ಭಾವನೆಯನ್ನು ಪರಿಗಣಿಸಿ ಈ ಪ್ರಶಸ್ತಿಯನ್ನು ಪ್ರಧಾನ ಮಾಡಲಾಯಿತು.

ಉಜಿರೆ ಶಿಕ್ಷಣ ಸಂಸ್ಥೆಯ ಪೂರಣ್ ವರ್ಮ, ದ.ಕ.ಜಿಲ್ಲಾ ಜಾನಪದ ಪರಿಷತ್ತು ಅಧ್ಯಕ್ಷ ಪ್ರವೀಣ್ ಕೊಡಿಯಾಲ್ ಬೈಲ್, ಹಿರಿಯರಾದ ಬಿ.ಭುಜಬಲಿ ಧರ್ಮಸ್ಥಳ, ಆಮಂತ್ರಣ ಪರಿವಾರ ಸಮೂಹ ಸಂಸ್ಥೆಗಳ ಮುಖ್ಯಸ್ಥ ವಿಜಯ ಕುಮಾರ್ ಜೈನ್, ಕಿರಣ್ ಶೆಟ್ಟಿ ಬೆಳ್ತಂಗಡಿ, ಕ.ಜಾ.ಪರಿಷತ್ ಬೆಳ್ತಂಗಡಿ ಘಟಕದ ಪ್ರಧಾನ ಸಂಚಾಲಕಿ ಕಾವ್ಯಶ್ರೀ ನಾಯಕ್ ಅಜೇರು, ಕನ್ನಡ ಸಾಹಿತ್ಯ ಪರಿಷತ್ ಬೆಳ್ತಂಗಡಿ ಕಾರ್ಯದರ್ಶಿ ರಾಮಕೃಷ್ಣ ಭಟ್ ಬೆಳಾಲು, ಸಭಾಂಗಣದ ಮಾಲಕರಾದ ಬೇಬಿ ಪೂಜಾರಿ ಪುಣ್ಕೆತ್ಯಾರು, ಶಾರದಾ ಶೆಟ್ಟಿ ಅಳದಂಗಡಿರಂಜನ್ ನೆರಿಯ, ಅರುಣ್ ಅಳದಂಗಡಿ ಉಪಸ್ಥಿತರಿದ್ದರು.

Exit mobile version