Site icon Suddi Belthangady

ಕೆಸೆಟ್ ಪರೀಕ್ಷೆಗೆ ಅರ್ಜಿ ಆಹ್ವಾನಿಸಿದ ಕರ್ನಾಟಕ ಪರೀಕ್ಷಾ ಪ್ರಾಧಿಕಾರ- ಸಹಾಯಕ ಪ್ರಾಧ್ಯಾಪಕರಾಗಲು ವಿದ್ಯಾಮಾತಾ ಅಕಾಡೆಮಿಯಿಂದ ಆನ್ಲೈನ್ ತರಬೇತಿ

ಪುತ್ತೂರು: ಕಳೆದ ಹಲವು ವರ್ಷಗಳಿಂದ ಸ್ಪರ್ಧಾತ್ಮಕ ಜಗತ್ತಿನಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿ ಅನೇಕ ಯುವ ಸ್ಪರ್ಧಾರ್ಥಿಗಳು ವಿವಿಧ ನೇಮಕಾತಿಗಳಲ್ಲಿ ಆಯ್ಕೆಯಾಗಲು ಕಾರಣಕರ್ತರಾದ ವಿದ್ಯಾಮಾತಾ ಅಕಾಡೆಮಿಯು ಇದೀಗ 2024ನೇ ಸಾಲಿನ ಕರ್ನಾಟಕ ರಾಜ್ಯ ಸಹಾಯಕ ಪ್ರಾಧ್ಯಾಪಕರ ಅರ್ಹತಾ ಪರೀಕ್ಷೆ(KSET)ಯ ಪೂರ್ವ ತಯಾರಿ ತರಬೇತಿಯನ್ನು ಆನ್ಲೈನ್ ಮೂಲಕ ನಡೆಸಲಿದ್ದು ಈ ಸಂಬಂಧ ತಕ್ಷಣದಿಂದಲೇ ಅನ್ವಯವಾಗುವಂತೆ ದಾಖಲಾತಿ ಪ್ರಕ್ರಿಯೆಯನ್ನು ಪ್ರಾರಂಭಿಸಿದೆ.

ತರಬೇತಿ ತರಗತಿಗಳು ರಾತ್ರಿ 7 ರಿಂದ 9ರ ಅವಧಿಯಲ್ಲಿ ವಿಷಯಾನುಸಾರವಾಗಿ ನಡೆಯಲಿದ್ದು, ಉನ್ನತ ಶಿಕ್ಷಣ ಸಂಸ್ಥೆಗಳಲ್ಲಿ ಸಹಾಯಕ ಪ್ರಾಧ್ಯಾಪಕರಾಗಿ ಸೇವೆ ಸಲ್ಲಿಸಲು ಬಯಸುವವರು , ಪೂರ್ವಭಾವಿಯಾಗಿ ತರಬೇತಿಯನ್ನು ಪಡೆಯಬಯಸುವ ಅಭ್ಯರ್ಥಿಗಳು ವಿದ್ಯಾಮಾತಾ ಅಕಾಡೆಮಿಯನ್ನು ಸಂಪರ್ಕಿಸಿ ತಮ್ಮ ದಾಖಲಾತಿಯನ್ನು ಪಡೆದುಕೊಳ್ಳಲು ಅವಕಾಶ ಕಲ್ಪಿಸಲಾಗಿದೆ ಎಂದು ಸಂಸ್ಥೆಯ ಪ್ರಕಟಣೆ ತಿಳಿಸಿದೆ.2023ನೇ ಸಾಲಿನ ಕೆಸೆಟ್ ಪರೀಕ್ಷೆಯಲ್ಲಿ ಅತ್ಯುತ್ತಮ ಸಾಧನೆ ಮಾಡಿದ್ದ ವಿದ್ಯಾಮಾತಾ ಅಕಾಡೆಮಿಯು ಈ ಸಾಲಿನ ಪರೀಕ್ಷೆಯಲ್ಲೂ ಸಾಧನೆಯನ್ನು ಮರುಕಳಿಸುವ ಇರಾದೆಯಲ್ಲಿದೆ.

ಯಾವ ರೀತಿ ನಡೆಯಲಿದೆ ಕೆಸೆಟ್ ಪರೀಕ್ಷೆ: ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ ಆಗಸ್ಟ್ 22 -2024, ಸ್ನಾತಕೋತ್ತರ ಪದವಿದರರು ಹಾಗೂ ಸದ್ಯ ಸ್ನಾತಕೋತ್ತರ ಪದವಿ ವ್ಯಾಸಂಗ ಮಾಡುತ್ತಿರುವವರು ಅರ್ಜಿ ಸಲ್ಲಿಸಲು ಅರ್ಹರಾಗಿರುತ್ತಾರೆ, ಪರೀಕ್ಷಾ ದಿನಾಂಕ ನವಂಬರ್ 24 -2024 ಗರಿಷ್ಠ ವಯಸ್ಸಿನ ಮಿತಿ ಇರುವುದಿಲ್ಲ, 41 ವಿಷಯಗಳಲ್ಲಿ ಪರೀಕ್ಷೆ ನಡೆಯಲಿದೆ, ಕೆಸೆಟ್ ಪರೀಕ್ಷೆ ನಡೆಯುವ ಪರೀಕ್ಷಾ ಕೇಂದ್ರಗಳು ಮಂಗಳೂರು, ಮೈಸೂರು, ಶಿವಮೊಗ್ಗ, ಬೆಂಗಳೂರು, ಧಾರವಾಡ, ಕಲ್ಬುರ್ಗಿ, ವಿಜಯಪುರ, ಬಳ್ಳಾರಿ, ತುಮಕೂರು, ದಾವಣಗೆರೆ, ಬೆಳಗಾವಿ.

ಅರ್ಜಿ ಸಲ್ಲಿಸಲು ಅವಶ್ಯಕ ದಾಖಲೆಗಳು: ಫೋಟೋ, ಆಧಾರ್ ಕಾರ್ಡ್, ಅಂಕಪಟ್ಟಿಗಳು,ಜಾತಿ ಪ್ರಮಾಣ ಪತ್ರ.ಹೆಚ್ಚಿನ ಮಾಹಿತಿಗಾಗಿ ಸಂಪರ್ಕಿಸಿರಿ- ಕೇಂದ್ರ ಕಛೇರಿ ಪುತ್ತೂರು, PH: 9148935808, 96204 68869.ಸುಳ್ಯ ಶಾಖೆ: PH 9448527606, ಕಾರ್ಕಳ ಶಾಖೆ PH 8310484380, 9740564044.

Exit mobile version