Site icon Suddi Belthangady

ನಡ: ಸರಕಾರಿ ಪ್ರೌಢ ಶಾಲೆಯಲ್ಲಿ ಮಳೆ ನೀರಿನ ಕೊಯ್ಲು ಮತ್ತು ಗಿಡ ನೆಡುವ ಕಾರ್ಯಕ್ರಮ

ನಡ: ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಭಿವೃದ್ಧಿ ಯೋಜನೆ ಬಿ ಸಿ ಟ್ರಸ್ಟ್ ನಡ -ಕನ್ಯಾಡಿ ಶೌರ್ಯ ವಿಪತ್ತು ನಿರ್ವಹಣಾ ಘಟಕ, ಸಂಯೋಜಕರು /ಸ್ವಯಂ ಸೇವಕರ ತಂಡ ಜು.21ರಂದು ಸರಕಾರಿ ಪ್ರೌಢಶಾಲೆ ನಡ ಶಾಲೆಯಲ್ಲಿ ಮಳೆ ನೀರಿನ ಕೊಯ್ಲು ಮತ್ತು ಗಿಡ ನೆಡುವ ಕಾರ್ಯಕ್ರಮವನ್ನು ಹಮ್ಮಿಕೊಂಡರು.

ನೀರು ಪ್ರತಿ ಜೀವ ರಾಶಿಗಳಿಗೂ ಅತ್ಯವಶ್ಯಕ. ಇಂದಿನ ತಂತ್ರಜ್ಞಾನ ಯುಗದಲ್ಲಿ ಅಂತರ್ಜಲದ ಮಟ್ಟ ದಿನೇ ದಿನೇ ಕಡಿಮೆಯಾಗುತ್ತಿದ್ದು ಜಲ ಸಂರಕ್ಷಣೆ ಜವಾಬ್ದಾರಿ ಪ್ರತಿಯೊಬ್ಬ ನಾಗರೀಕನ ಕರ್ತವ್ಯವಾಗಿದೆ. ಮೇಲ್ಬಾವಣಿಯ ಮಳೆ ನೀರನ್ನು ಶುದ್ದೀಕರಿಸಿ ನೇರವಾಗಿ ಕೊಳವೆ ಬಾವಿಗೆ ಹಾಯಿಸಿ ಅಂತರ್ಜಲವನ್ನು ಹೆಚ್ಚಿಸುವ ಯೋಜನೆಯನ್ನು ಹಮ್ಮಿಕೊಳ್ಳಲಾಯಿತು.

ಸಂಯೋಜಕರಾದ ವಸಂತಿ, ಶಕುಂತಲಾ ಸ್ವಯಂ ಸೇವಕರಾದ ಮಂಜುನಾಥ್, ಮೋಹನ್, ಒಲ್ವಿನ್ ಡಿ’ಸೋಜ, ಹರೀಶ್, ಅರ್ವಿನ್ ಮಿರಾಂದ, ಗೋಪಾಲ್, ಕೇಶವ, ಶೇಕ್ ಹರ್ಷದ್, ಪುರಂದರ, ಎನ್ ಬಿ ಹರಿಶ್ಚಂದ್ರ, ಲೀಲಾ, ವಸಂತಿ, ಸುಲೋಚನಾ, ಶ್ರಮದಾನದಲ್ಲಿ ಪಾಲ್ಗೊಂಡರು.

ಶಾಲಾ ಮುಖ್ಯ ಶಿಕ್ಷಕ ಮೋಹನ ಬಾಬು ಡಿ, ಶಾಲಾಭಿವೃದ್ಧಿ ಸಮಿತಿಯ ಕಾರ್ಯಾಧ್ಯಕ್ಷ ಸುಧಾಕರ್, ಸದಸ್ಯ ಧರಣೇಂದ್ರ ಕುಮಾ‌ರ್, ಶಿಕ್ಷಕ ಶಿವಪುತ್ರ ಸುಣಗಾ‌ರ್ ಮತ್ತು ಶಾಲಾ ಮಕ್ಕಳು ಉಪಸ್ಥಿತರಿದ್ದರು. ಮುಖ್ಯ ಶಿಕ್ಷಕರು ವಿಪತ್ತು ನಿರ್ವಹಣಾ ತಂಡದ ಸಂಯೋಜಕರು ಮತ್ತು ಎಲ್ಲಾ ಸ್ವಯಂ ಸೇವಕರಿಗೆ ಅಭಿನಂದನೆಯನ್ನು ಸಲ್ಲಿಸಿದರು.

Exit mobile version