ಉಜಿರೆ: ತಾಲೂಕಿನಲ್ಲಿ ಡೆಂಗ್ಯು ಪ್ರಕರಣ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ಬೆಳ್ತಂಗಡಿ ರೋಟರಿ ಕ್ಲಬ್ ಮುನ್ನೆಚ್ಚರಿಕಾ ಕ್ರಮವಾಗಿ ಉಜಿರೆ ಗ್ರಾಮ ಪಂಚಾಯತ್ ಗೆ ಫಾಗಿಂಗ್ ಮೆಷಿನ್ ಕೊಡುಗೆಯಾಗಿ ವಿತರಿಸಿದೆ. ಇದರ ಜೊತೆಗೆ ಫಾಗಿಂಗ್ ಮೆಷಿನ್ ಗೆ ಬಳಸುವ ಗ್ಯಾಸ್ ಸಿಲಿಂಡರ್, ಫಾಗಿಂಗ್ ದ್ರಾವಣವನ್ನು ವಿತರಿಸಲಾಗಿದೆ.ರೋಟರಿ ಕ್ಲಬ್ ಬೆಳ್ತಂಗಡಿಯ ಅಧ್ಯಕ್ಷ ಪೂರನ್ ವರ್ಮ ಗ್ರಾಮ ಪಂಚಾಯತ್ ಅಧ್ಯಕ್ಷೆ ಉಷಾಕಿರಣ್ ಕಾರಂತ್ ರವರಿಗೆ ಗ್ರಾಮ ಪಂಚಾಯತ್ ಮುಂಭಾಗ ಮೆಷಿನ್ ಹಸ್ತಾಂತರಿಸಿದರು.
ಈ ವೇಳೆ, ರೋಟರಿ ಬೆಳ್ತಂಗಡಿಯ ಕಾರ್ಯದರ್ಶಿ ಸಂದೇಶ್ ರಾವ್, ಉಜಿರೆ ಗ್ರಾಮ ಪಂಚಾಯತ್ ಉಪಾಧ್ಯಕ್ಷ ರವಿಕುಮಾರ್ ಬರೆಮೇಲು, ಪಿಡಿಒ ಪ್ರಕಾಶ್ ಶೆಟ್ಟಿ ನೊಚ್ಚ, ರೋಟರಿಯ ಅರವಿಂದ್ ಕಾರಂತ್, ಡಿ ಎಂ ಗೌಡ, ಶ್ರೀಧರ್ ಕೆ ವಿ, ಡಾ.ಎ.ಜಯಕುಮಾರ್ ಶೆಟ್ಟಿ, ಉಜಿರೆ ಗ್ರಾಮ ಪಂಚಾಯತ್ ನ ಸಿಬ್ಬಂದಿ ವರ್ಗದವರು ಕಾರ್ಯಕ್ರಮದಲ್ಲಿ ಭಾಗಿಯಾದರು.