Site icon Suddi Belthangady

ಪುತ್ತಿಲ: ಸ್ಮಶಾನ ಜಾಗದ ಗಡಿ ಗುರುತಿಸುವ ವೇಳೆ ಬಾರ್ಯ ಗ್ರಾ.ಪಂ.ಅಧ್ಯಕ್ಷರಿಗೆ ಜೀವ ಬೆದರಿಕೆ- ಪುಂಜಾಲಕಟ್ಟೆ ಪೊಲೀಸ್ ಠಾಣೆಯಲ್ಲಿ ದೂರು ದಾಖಲು

ಬೆಳ್ತಂಗಡಿ: ಬಾರ್ಯ ಗ್ರಾಮ ಪಂಚಾಯತು ವ್ಯಾಪ್ತಿಯ ಪುತ್ತಿಲ ಗ್ರಾಮದಲ್ಲಿ ಸ್ಮಶಾನಕ್ಕೆಂದು ಗುರುತಿಸಿರುವ ಜಾಗದ ಗಡಿ ಗುರುತು ಮಾಡಲು ಸರ್ವೆ ನಡೆಸುವ ಸಂದರ್ಭದಲ್ಲಿ ಗ್ರಾ.ಪಂ ಅಧ್ಯಕ್ಷರಿಗೆ ಹಾಗೂ ಇತರರಿಗೆ ಅವಾಚ್ಯವಾಗಿ ನಿಂದಿಸಿ ಜೀವ ಬೆದರಿಕೆ ಹಾಕಿರುವ ಬಗ್ಗೆ ಪೂಂಜಾಲಕಟ್ಟೆ ಪೊಲೀಸರಿಗೆ ಬಾರ್ಯ ಗ್ರಾ.ಪಂ ಅಧ್ಯಕ್ಷ ಪಿ ಕೆ ಉಸ್ಮಾನ್ ದೂರು ನೀಡಿದ್ದಾರೆ.

ಪುತ್ತಿಲ ಗ್ರಾಮದ ಸಂ, ನಂ 73/2a ಯಲ್ಲಿ 20ಸೆನ್ಸ್ ಪರಿಶಿಷ್ಟ ಜಾತಿಯವರಿಗೆ ಹಾಗೂ 20ಸೆನ್ಸ್ ಪರಿಶಿಷ್ಟ ಪಂಗಡದವರಿಗೆ ಹಾಗೂ ಸ ನಂ 66/1p ಯಲ್ಲಿ 40 ಸೆನ್ಸ್ ಹಿಂದೂ ರುದ್ರಭೂಮಿಗೆ ಮೀಸಲಿರಿಸಿದ ಜಮೀನಿದೆ. ದಶಕಗಳ ಹಿಂದೆಯೇ ಮೀಸಲಿರಿಸಲಾಗಿದ್ದ ಈ ಜಮೀನನ್ನು ಗಡಿ ಗುರುತು ಮಾಡಲು ಗ್ರಾಮಪಂಚಾಯತಿನಿಂದ ಕಂದಾಯ ಇಲಾಖೆಗೆ ಮನವಿ ಸಲ್ಲಿಸಲಾಗಿತ್ತು ಅದರಂತೆ ಜು 20ರಂದು ಗಡಿಗುರುತಿಗೆ ಬಂದ ಸಂದರ್ಭದಲ್ಲಿ ಸ್ಥಳೀಯರಾದ ಸಂತೋಷ್, ಕೋಟ್ಯಪ್ಪ ಪೂಜಾರಿ, ಸೂರಜ್‌ ಅವರು ಗ್ರಾ.ಪಂ ಅಧ್ಯಕ್ಷರ ಮೇಲೆ ಹಲ್ಲೆಗೆ ಮುಂದಾಗಿದ್ದು ಅವಾಚ್ಯವಾಗಿ ನಿಂದಿಸಿ ಜಾಗ ಅಳತೆಗೆ ಬಂದರೆ ಜೀವ ಸಹಿತ ಬಿಡುವುದಿಲ್ಲ ಎಂದು ಜೀವಬೆದರಿಕೆ ಹಾಕಿರುವುದಾಗಿ ಆರೋಪಿಸಿ ಪೂಂಜಾಲಕಟ್ಟೆ ಪೊಲೀಸರಿಗೆ ದೂರು ನೀಡಲಾಗಿದೆ.

ಅದೇ ರೀತಿ ಸ್ನಶಾನಕ್ಕೆಂದು ಗುರುತಿಸಲಾಗಿರುವ ಜಾಗದಲ್ಲಿ ಇದ್ದ ಮರಗಳನ್ನು ಸದ್ರಿ ವ್ಯಕ್ತಿಗಳು ಗ್ರಾ.ಪಂ ಗೆ ಮಾಹಿತಿ ನೀಡದೆ ಅಕ್ರಮವಾಗಿ ಕಡಿದು ಸಾಗಾಟಮಾಡಿದ್ದಾರೆ ಹಾಗೂ ಜಮೀನನ್ನು ಕಬಳಿಸುವ ಪ್ರಯತ್ನ ನಡೆಸಿರುವುದಾಗಿಯೂ ಇದರ ವಿರುದ್ದ ಕ್ರಮಕೈಗೊಳ್ಳುವಂತೆ ವಿನಂತಿಸಿದ್ದಾರೆ.ಪೊಲೀಸರು ದೂರನ್ನುಸ್ವೀಕರಿಸಿದ್ದು ಪರಿಶೀಲನೆ ನಡೆಸುತ್ತುದ್ದಾರೆ.

Exit mobile version