ಕೊಕ್ಕಡ: ದೇಶದ ಶ್ರೀಮಂತ ದೇವಾಲಯಗಳಲ್ಲಿ ಒಂದಾದ ತಿರುವನಂತಪುರದ ಶ್ರೀ ಅನಂತ ಪದ್ಮನಾಭ ದೇವಾಲಯಕ್ಕೆ ಕೊಕ್ಕಡದ 46 ಮಂದಿ ಭಕ್ತರು ಜು.20ರಂದು ಭೇಟಿ ನೀಡಿ ಶ್ರೀ ದೇವರ ದರ್ಶನ ಪಡೆದರು.
ಶ್ರೀ ಅನಂತಪದ್ಮನಾಭ ಸ್ವಾಮಿ ದೇವಸ್ಥಾನದ ಪ್ರಧಾನ ಅರ್ಚಕರಾದ ಕೊಕ್ಕಡ ಮೂಲದ ಸತ್ಯನಾರಾಯಣ (ನಾಗೇಶ) ತೋಡ್ತಿಲ್ಲಾಯಾರನ್ನು ಭೇಟಿ ಮಾಡಿ ಶ್ರೀ ದೇವರ ಪ್ರಸಾದ ಪಡೆದರು.
ಯಾತ್ರೆಯ ನೇತೃತ್ವವನ್ನು ಕೊಕ್ಕಡದವರಾದ ಮಧುರ ಜ್ಯೂಸ್ ಸೆಂಟರ್ ಮಾಲಕ ಸಾಂತಪ್ಪ ಮಡಿವಾಳ ಮಲ್ಲಿಗೆ ಮಜಲು, ಗಣೇಶ್ ಎಲೆಕ್ಟ್ರಿಕಲ್ಸ್ ನ ಗಣೇಶ್ ಹಾಗೂ ಲಕ್ಷ್ಮಿ ಎಲೆಕ್ಟ್ರಿಕಲ್ಸ್ ನ ಪುರುಷೋತ್ತಮ ಕೆ ವಹಿಸಿದ್ದರು.