Site icon Suddi Belthangady

ಉಜಿರೆ: ಶ್ರೀ ಧ.ಮಂ. ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ ಸೈಬರ್‌ ಅಪರಾಧಗಳ ಬಗ್ಗೆ ಕಾರ್ಯಗಾರ- ಸೈಬರ್‌ ಮೋಸಗಳಿಗೆ ಎಚ್ಚರಿಕೆಯೇ ಮದ್ದು- ಮಂಜುನಾಥ ಆರ್.ಜಿ

ಉಜಿರೆ: ಜನರ ಭಾವನೆಯನ್ನೇ ಬಂಡವಾಳವಾಗಿಸಿ, ತಂತ್ರಜ್ಙಾನಗಳನ್ನು ಬಳಸಿ ಮಾಡುತ್ತಿರು ಸೈಬರ್‌ ಅಪರಾಧಗಳು ಇತ್ತೀಚೆಗೆ ಜಾಸ್ತಿ ಆಗುತ್ತಿದೆ. ವಿದ್ಯಾವಂತರೇ ಈ ವಂಚನೆಯ ಜಾಲಗಳಲ್ಲಿ ಮತ್ತೆ, ಮತ್ತೆ ಸಿಲುಕುತ್ತಿರುವುದು ಆಶ್ಛರ್ಯದಾಯಕ ಕೂಡ ಎಂದು ಸೈಬರ್‌ ಝೆನ್‌ ವಿಭಾಗದ ಡಿವೈ.ಎಸ್.ಪಿ ಮಂಜುನಾಥ ಆರ್.ಜಿ ಕಳವಳ ವ್ಯಕ್ತಪಡಿಸಿದರು.

ಅವರು ಇತ್ತೀಚೆಗೆ ಉಜಿರೆಯ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜಿನ ಸ್ನಾತಕೋತ್ತರ ಕೇಂದ್ರದಲ್ಲಿ, ಬೆಳ್ತಂಗಡಿಯ ರೋಟರಿ ಹಾಗು ಮಂಗಳೂರಿನ ಸೈಬರ್‌ ಕ್ರೈಮ್‌ ಅಪರಾಧ ತಡೆ ದಳ ಜಂಟಿಯಾಗಿ ಬಿವೋಕ್‌ ಡಿಜಿಟಲ್‌ ಮೀಡಿಯಾ ಮತ್ತು ಫಿಲಂ ಮೇಕಿಂಗ್‌, ರಿಟೈಲ್‌ ಆಂಡ್‌ ಸಪ್ಲೈಚೈನ್ ವಿಭಾಗದ ಸಹಯೋಗದಲ್ಲಿ ಬಿವೋಕ್‌ ವಿದ್ಯಾರ್ಥಿಗಳಿಗೆ ಆಯೋಜಿಸಿದ್ದ ಸೈಬರ್‌ ಅಪರಾಧಗಳ ಬಗ್ಗೆ ಹಮ್ಮಿಕೊಂಡ ಪ್ರಶಿಕ್ಷಣ ಕಾರ್ಯಗಾರದಲ್ಲಿ ಮಾತನಾಡುತ್ತಿದ್ದರು.ಬೇಗ ಶ್ರೀಮಂತರಾಗಬೇಕು, ಯಾವುದೋ ಬಹುಮಾನದ ದುರಾಸೆಗೆ‌, ಹೆಚ್ಚಾಗಿ ಸೈಬರ್‌ ಮೋಸಗಳು ಜಾಸ್ತಿಯಾಗಿದೆ. ಹಾಗಾಗಿ ಯಾವುದೇ ಡಿಜಿಟಲ್‌ ಸಾಧನಗಳನ್ನು, ಲಿಂಕ್‌ನ್ನು, ಓಟಿಪಿ ಗಳನ್ನು ಬಳಸುವಾಗ ಜಾಗರೂಕರಾಗಿರಬೇಕು ಎಂದರು. ಈ ಹೆಚ್ಚಿನ ಅಪಾರಧಗಳಲ್ಲಿ ಆರೋಪಿಯ ಪತ್ತೆ ಬಹಳ ಕಷ್ಟದ ಜೊತೆಗೆ ಕಳೆದುಕೊಂಡದನ್ನು ಹಿಂತಿರುಗಿಸವುದು ಕಷ್ಠ ಆ ನಿಟ್ಟಿನಲ್ಲಿ ಸಾರ್ವಜನಿಕರು ಎಚ್ಚರಿಕೆಯಿಂದ ಇದನ್ನು ಬಳಕೆ ಮಾಡುವುದೊಂದೆ ಇದಕ್ಕಿರುವ ಸೂಕ್ತ ಪರಿಹಾರ ಎಂದು ಕಿವಿಮಾತು ಹೇಳಿದರು.

ಕಾರ್ಯಕ್ರಮದಲ್ಲಿ ಮಾತಾಡಿದ ಇನ್ನೋರ್ವ ಪೋಲಿಸ್‌ ಅಧಿಕಾರಿ ಮಂಜುನಾಥ ಸೈಬರ್‌ ಲೋಕದ ಈ ಮೋಸಗಳನ್ನು ಜನರಿಗೆ ಹೆಚ್ಚು ಮನವರಿಕೆ ಮಾಡಿಕೊಡುವ ಮೂಲಕ ಅವರಿಗೆ ಈ ವಿಚಾರದಲ್ಲಿ ಸರಿಯಾದ ಜ್ಞಾನವನ್ನು ಕೊಡುವುದು ಈ ಸರಣಿ ಕಾರ್ಯಕ್ರಮದ ಉದ್ದೇಶ, ಇದರ ಮೊದಲ ಕಾರ್ಯಕ್ರಮ ಇಂದು ಈ ಕಾಲೇಜಿನಲ್ಲಿ ನಡೆದಿದೆ ಮುಂದೆ ದಕ್ಷೀಣ ಕನ್ನಡದ ಎಲ್ಲಾ ಭಾಗಗಳನ್ನು ಇದನ್ನು ಮಾಡಲು ರೂಪು ರೇ಼ಷೆ ಮಾಡಿಕೊಂಡಿದ್ದೇವೆ, ನೀವು ವಿದ್ಯಾರ್ಥಿಗಳು ನಿಮ್ಮ ಊರುಗಳಲ್ಲಿ ಇತರರಿಗೆ ಈ ಮಾಹಿತಿಗಳನ್ನು ಹಂಚಿಕೊಳ್ಳಬೇಕು ಎಂದರು.

ಸಮಾರಂಭವನ್ನು ಆಯೋಜಿಸಿದ್ದ ಬೆಳ್ತಂಗಡಿಯ ರೋಟರಿಯ ಅಧ್ಯಕ್ಷ ಪೂರಣ್‌ ವರ್ಮ ಮಾತನಾಡಿ ಸೈಬರ್‌ ಅಪರಾಧ ಹಾಗು ಮೋಸಗಳ ಬಗ್ಗೆ ಎಲ್ಲರೂ ತಿಳಿದುಕೊಳ್ಳುವುದು ತುಂಬಾ ಅಗತ್ಯ ಆ ನಿಟ್ಟಿನಲ್ಲಿ ಸೈಬರ್‌ ಸೆಲ್ಲಿನ ಈ ಕಾರ್ಯಕ್ರಮ ಅಭಿನಂದನೆಗೆ ಅರ್ಹವಾಗಿದೆ.

ಅಧ್ಯಕ್ಷತೆ ವಹಿಸಿದ್ಧ ಕಾಲೇಜಿನ ಪ್ರಾಂಶುಪಾಲ ಡಾ. ಬಿ ಎ ಕುಮಾರ ಹೆಗ್ಡೆಮಾತನಾಡಿ, ಮೊಬೈಲ್‌ ಅನ್ನೋವುದು ಇವತ್ತು ಒಂದು ವ್ಯಸನ ಆಗಿದೆ, ನಮ್ಮ ಹಲವಾರು ನಡೆ, ನುಡಿಗಳನ್ನು ಅದು ಬದಲಾಯಿಸಿದೆ. ವಿದ್ಯಾರ್ಥಿಗಳು ಯಾವುದೇ ಕಾರಣಕ್ಕು ಯಾವ ಗೀಳಿನ ಗೋಜಿಗೂ ಹೋಗದೆ, ನೈತಿಕ ಚೌಕಟ್ಟಿನಲ್ಲಿ ಬದುಕು ರೂಪಿಸೋದನ್ನು ಕಲಿಬೇಕು ಅಂದರು

ಈ ಸಂದರ್ಭದಲ್ಲಿ ಸ್ನಾತಕೋತ್ತರ ಕೇಂದ್ರದ ಡೀನ್‌ ಡಾ.ಪಿ ವಿಶ್ವನಾಥ್‌, ಬಿವೋಕ್‌ ವಿಭಾಗದ ಪ್ರಾಧ್ಯಾಪಕರು, ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಕಾರ್ಯಕ್ರಮ ನಿರೂಪಣೆಯನ್ನು ಬಿವೋಕ್‌ ವಿಭಾಗದ ಪ್ರಾಧ್ಯಪಕಿ ಆಶ್ವಿನಿ ಜೈನ್‌ ನಿರ್ವಹಿಸದರು, ಪ್ರಾಧ್ಯಪಕ ಪ್ರವೀಣ ಡಿ ಕಾರ್ಯಕ್ರಮವನ್ನು ಸಂಯೋಜಿಸಿದರು.

Exit mobile version