Site icon Suddi Belthangady

‌ಕರಾಯ: ರಾಜ್ಯ ಹೆದ್ದಾರಿ ಹಾಗೂ ಹದಗೆಟ್ಟ ಕರಾಯ, ಇಳಂತಿಲ ಕೂಡು ರಸ್ತೆಯಲ್ಲಿ ಮಕ್ಕಳಿಂದ ದೋಣಿ ಸ್ಪರ್ಧೆ, ಬೃಹತ್ ಗುಂಡಿ ಮುಚ್ಚಲು ಪ್ರತಿಭಟನೆ

ಬೆಳ್ತಂಗಡಿ: ಕರಾಯ, ಇಳಂತಿಲ ರಾಜ್ಯ ಹೆದ್ದಾರಿ ಕೂಡು ರಸ್ತೆಯ ಮೂಲಕ ಉರುವಾಲು ಗ್ರಾಮದ ರಸ್ತೆಯಲ್ಲಿದೆ.ಪ್ರಯಾಣಿಕರ ಜೀವ ಬಲಿ ಪಡೆಯಲು ಕಾಯುತ್ತಿದೆ ಬೃಹತ್ತಾದ ಗುಂಡಿಗಳ ಸಾಲು.

ತಣ್ಣೀರುಪಂಥ ಪಂಚಾಯತ್, ಕಣಿಯೂರು ಮತ್ತು ಇಳಂತಿಲ ಪಂಚಾಯತುಗಳ ವ್ಯಾಪ್ತಿಯಲ್ಲಿರುವ ಸುಮಾರು 300ಕ್ಕೂ ಹೆಚ್ಚು ಮನೆಗಳ ಗ್ರಾಮಸ್ಥರು, ಶಾಲಾ ವಿಧ್ಯಾರ್ಥಿಗಳು, ಹೈನುಗಾರಿಕೆ ಕೃಷಿಕರು, ನೂರಾರು ವಾಹನಗಳು, ಸಾವಿರಾರು ಗ್ರಾಮಸ್ಥರು ಹದಗೆಟ್ಟ ಅಂದಾಜು 2 ಕಿ.ಲೋ ಮೀಟರ್ ರಸ್ತೆಯಲ್ಲಿ ಚರಂಡಿ ವ್ಯವಸ್ಥೆ ಇಲ್ಲದೆ ಮಳೆ ನೀರು ರಸ್ತೆಯ ಮೂಲಕ ಹೋಗುತ್ತದೆ. ಗ್ರಾಮಸ್ಥರಿಗೆ ನಿತ್ಯ ಓಡಾಡುವಾಗ ಬೃಹತ್ ಗಾತ್ರದ ಗುಂಡಿಗಳಿಂದ ತೊಂದರೆ ಆಗುತ್ತದೆ ತಕ್ಷಣವೇ ಸರಿಪಡಿಸವಂತೆ ಒತ್ತಾಯ ಮಾಡಿದರು.

ಮಳೆ ಬರುವ ಸಂದರ್ಭದಲ್ಲಿ ನೀರು ನಿಂತಿರುವ ಗುಂಡಿ ಗಮನಕ್ಕೆ ಬಾರದೆ ಸುಮಾರು 10ಕ್ಕೂ ಹೆಚ್ಚು ದ್ವಿಚಕ್ರ ವಾಹನ ಸವಾರರ ರಸ್ತೆಗೆ ಬಿದ್ದು ಗಾಯಗೊಂಡಿದ್ದಾರೆ. ಹೈನುಗಾರಿಕೆ ಕೃಷಿಕರ ಹಾಲು ರಸ್ತೆಯಲ್ಲಿ ಅಭಿಷೇಕವಾದ ಘಟನೆಗಳು ನಡೆದಿದೆ. ಜೊತೆಯಲ್ಲಿದ್ದ ಮಹಿಳೆಯರು, ಮಕ್ಕಳು ರಸ್ತೆಗೆ ಅಪ್ಪಳಿಸಿ ಕೈ-ಕಾಲು-ತಲೆಗೆ ಗಾಯ ಮಾಡಿಕೊಂಡು ಆಸ್ಪತ್ರೆಗೆ ದಾಖಲಾಗಿರುವ ಬಗ್ಗೆ ಸ್ಥಳೀಯರು ಅಸಮಾಧಾನವನ್ನು ವ್ಯಕ್ತಪಡಿಸಿದರು.

ರಸ್ತೆಯ ಗುಂಡಿ ಮುಚ್ಚಲು ಸಂಬಂಧಿಸಿದ ಇಲಾಖೆ ಗ್ರಾಮ ಪಂಚಾಯತ್ ಹಾಗೂ ಜನಪ್ರತಿನಿಧಿಗಳಿಗೆ ಈಗಾಗಲೇ ಮನವಿ ನೀಡಿದರೂ,ನಿದ್ದೆ ಕಣ್ಣಿನಲ್ಲಿರುವ ಅಧಿಕಾರಿಗಳಿಗೆ ಕಿಂಚಿತ್ತೂ ಗಮನಹರಿಸಲು ಸಾಧ್ಯವಾಗುವುದಿಲ್ಲ ಎಂದು ಖಂಡಿಸಿದರು.ತಕ್ಷಣ ರಸ್ತೆ ಗುಂಡಿಗಳನ್ನು ಮುಚ್ಚಿ ಸಂಚಾರಕ್ಕೆ ಅನುಕೂಲ ಮಾಡಿಕೊಡ ಬೇಕು.ತಪ್ಪಿದಲ್ಲಿ ಮುಂದಿನ ದಿನಗಳಲ್ಲಿ ಪಂಚಾಯತ್ ಹಾಗೂ ಇಲಾಖೆಯಲ್ಲಿ ಉಗ್ರ ಪ್ರತಿಭಟನೆ ಮಾಡುವುದಾಗಿ ಎಚ್ಚರಿಸಿದರು.

ಈ ಸಂದರ್ಭದಲ್ಲಿ ಅಝೀಜ್ ಪೈಝಿ, ಅಶ್ರಫ್ ಕೆ.ಎಂ, ರಾಶಿದ್ ಜೌಹರಿ, ಸಿದ್ಧೀಕ್ ಪೈಝಿ, ದಯಾನಂದ, ಗೋಪಾಲ ಗೌಡ, ಚೇತನ್ ಪೂಜಾರಿ, ಶಂಶು, ಸ್ವಾಲಿಹ್ ಮುರಿಯಾಳ, ಟೋನಿ ಲೋಬೋ, ಆನಂದ, ಶಾಲಾ ವಿಧ್ಯಾರ್ಥಿಗಳು ಹಾಗೂ ಗ್ರಾಮಸ್ಥರು ಭಾಗವಹಿಸಿದರು.

Exit mobile version