ನಿಡಿಗಲ್: ನಿರಂತರವಾಗಿ ಸುರಿಯುತ್ತಿರುವ ಗಾಳಿ ಮಳೆಗೆ ಇತಿಹಾಸ ಪ್ರಸಿದ್ಧ ಸಿರಿಗಳ ಆಲಡೆ ಕ್ಷೇತ್ರ ಲೋಕನಾಡು ಶ್ರೀ ಲೋಕನಾಥೇಶ್ವರ ದೇವಸ್ಥಾನದ ಮುಂಭಾಗದಲ್ಲಿ ಹರಿಯುತ್ತಿರುವ ನೇತ್ರಾವತಿ ನದಿಗೆ ಅಡ್ಡಲಾಗಿ ನಿರ್ಮಿಸಿರುವ ತಡೆಗೋಡೆ ಸಂಪೂರ್ಣವಾಗಿ ಕುಸಿದಿದ್ದು ಪಕ್ಕದಲ್ಲೇ ಇರುವ ಪವಿತ್ರವಾದ ಅಶ್ವಥ ವೃಕ್ಷಕ್ಕೆ ನಿರ್ಮಿಸಿರುವ ಕಟ್ಟೆಯು ಸಂಪೂರ್ಣವಾಗಿ ಬಿರುಕು ಬಿದ್ದಿದೆ.
ಈ ತಡೆಗೋಡೆಯು ತುಂಬಾ ಹಳೆಯದಾಗಿದ್ದು ಹೊಸ ತಡೆಗೋಡೆ ನಿರ್ಮಿಸುವಂತೆ ಇಲಾಖೆಗೆ ಈ ಹಿಂದೆಯೇ ಮನವಿ ಸಲ್ಲಿಸಲಾಗಿದ್ದು ಆದರೆ ಇಲಾಖೆಯು ಇದರ ಬಗ್ಗೆ ನಿರ್ಲಕ್ಷ್ಯ ವಹಿಸಿದ ಕಾರಣ ತಡೆಗೊಡೆಯು ಕುಸಿದು ದೇವಸ್ಥಾನದ ಅಂಗಣವು ಮುಂದಿನ ದಿನಗಳಲ್ಲಿ ಕುಸಿಯುವ ಭೀತಿ ಎದುರಾಗಿದೆ ಎಂದು ದೇವಸ್ಥಾನದ ಭಕ್ತಾದಿಗಳು ಆತಂಕಗೊಂಡಿದ್ದಾರೆ. ಸಂಬಂಧಪಟ್ಟ ಇಲಾಖೆ ಈ ಬಗ್ಗೆ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಊರವರು ಹಾಗೂ ದೇವಸ್ಥಾನದ ಭಕ್ತರು ಆಗ್ರಹಿಸುತ್ತಿದ್ದಾರೆ.