ಚಾರ್ಮಾಡಿ: ಗ್ರಾಮದ ತೋಟತ್ತಾಡಿಯ ಮುಖ್ಯ ರಸ್ತೆಯ ಸೇತುವೆಯ ಅಪಾಯದ ಹಂಚಿನಲ್ಲಿದ್ದು ದುರಸ್ತಿಗೊಳಿಸುವಂತೆ ಗ್ರಾಮಸ್ಥರು ಆಗ್ರಹಿಸಿದ್ದಾರೆ.ಕಳೆದ 70 ವರ್ಷಗಳಲ್ಲಿ ಇರುವಂತಹ ಸೇತುವೆಯು ಮಳೆಗೆ ಹಾನಿಯಾಗಿದ್ದು ಪಂಚಾಯತಿ ಸದಸ್ಯರು ಹಾಗೂ ತಾಲೂಕು ಹಾಗೂ ಜಿಲ್ಲಾ ಪಂಚಾಯತಿ ಸದಸ್ಯರು ದುರಸ್ತಿಪಡಿಸುವ ಯಾವುದೇ ಕೆಲಸಗಳನ್ನು ಮಾಡದೆ ಕೇವಲ ಪೊಳ್ಳು ಭರವಸೆಯನ್ನು ನೀಡಿದ್ದಾರೆ.
ಇದೀಗ ಈ ಸೇತುವೆ ಅಪಾಯದಲ್ಲಿದ್ದು ಶಾಲೆ, ಕಾಲೇಜು ಹಾಗೂ ದೈನಂದಿನ ಕೆಲಸಕ್ಕೆ ಹೋಗುವಂತಹ ಜನರು ಈ ಸೇತುವೆ ಮೇಲೆ ಹೋಗುವಾಗ ಜೀವ ಭಯದಲ್ಲಿ ಜೀವವನ್ನು ಕೈಯಲ್ಲಿ ಹಿಡಿದು ಹೋಗುವ ಪರಿಸ್ಥಿತಿ ನಿರ್ಮಾಣವಾಗಿದೆ.
ಆದ್ದರಿಂದ ಅನಾಹುತ ಆಗುವ ಮೊದಲೇ ಇದಕ್ಕೆ ಸಂಬಂಧಪಟ್ಟ ಪಂಚಾಯಿತಿ ಸದಸ್ಯರು ಹಾಗೂ ಜಿಲ್ಲಾ ಪಂಚಾಯತ್ ತಾಲೂಕು ಪಂಚಾಯತ್ ಹಾಗೂ ಅಧಿಕಾರಿಗಳು ಇದನ್ನು ಗಂಭೀರವಾಗಿ ಪರಿಗಣಿಸಿ ಇದಕ್ಕೊಂದು ಶಾಶ್ವತವಾದ ಪರಿಹಾರ ಕಂಡುಕೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.