Site icon Suddi Belthangady

ಪುಂಜಾಲಕಟ್ಟೆ: ಲಾರಿ ಪಲ್ಟಿ

ಪುಂಜಾಲಕಟ್ಟೆ: ಪುಂಜಾಲಕಟ್ಟೆ ಪೊಲೀಸ್ ಠಾಣಾ ವ್ಯಾಪ್ತಿಯ ಸರ್ಕಾರಿ ಆಸ್ಪತ್ರೆಯ ಸಮೀಪ ಲಾರಿ ಸ್ಕಿಡ್ ಆಗಿ ಪಲ್ಟಿಯಾದ ಘಟನೆ ಜು.19ರಂದು ನಡೆದಿದೆ.

ಲಾರಿ ಮದ್ವದಿಂದ ಪುಂಜಾಲಕಟ್ಟೆ ಕಡೆಗೆ ಹೋಗುತ್ತಿದ್ದು ಎನ್ನಲಾಗಿದೆ.ಲಾರಿಯಲ್ಲಿ ಇದ್ದವರು ಗಾಯಗೊಂಡಿದ್ದು ಸ್ಥಳೀಯರು ಆಸ್ಪತ್ರೆಗೆ ದಾಖಲಿಸಿದ್ದಾರೆ.

ಫರಂಗಿಪೇಟೆ ನಿವಾಸಿ ಕಾರ್ತಿಕ್ ಎಂಬಾತ ಮೃತಪಟ್ಟ ವ್ಯಕ್ತಿಯಾಗಿದ್ದಾನೆ.ಇನ್ನುಳಿದಂತೆ ಗಾಯಗೊಂಡವರ ಹೆಸರು ಮಾಹಿತಿ ಲಭ್ಯವಾಗಿಲ್ಲ.

ವಗ್ಗ ಸಮೀಪದ ‌ಮದ್ವ ಎಂಬಲ್ಲಿನ ಸಾಮಿಯಾನ ಅಂಗಡಿಗೆ ಸೇರಿದ ಲಾರಿ ಇದಾಗಿದ್ದು, ಐಶರ್ ಲಾರಿಯಲ್ಲಿ ಸಾಮಿಯಾನದ ಸಾಮಾಗ್ರಿಗಳನ್ನು ಬೆಳ್ತಂಗಡಿ ಕಡೆಗೆ ಕೊಂಡುಹೋಗುತ್ತಿದ್ದ ವೇಳೆ ಪುಂಜಾಲಕಟ್ಟೆ ಮಂದಿರದ ಬಳಿ ತಿರುವಿನಲ್ಲಿ ಲಾರಿ ಪಲ್ಟಿಯಾಗಿದೆ.

ಲಾರಿಯೊಳಗೆ ಒಟ್ಟು ಹತ್ತು ಮಂದಿ ಇದ್ದರು ಎನ್ನಲಾಗಿದ್ದು ಸರಿಯಾದ ಮಾಹಿತಿ ಲಭ್ಯವಾಗಿಲ್ಲ.ಗಾಯಗೊಂಡವರನ್ನು ಮಂಗಳೂರು ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದೆ.ಲಾರಿ‌ಪಲ್ಟಿಯಾಗಿ ಸುಮಾರು ಸಮಯ ಲಾರಿ ಅಡಿಯಲ್ಲಿ ಸಿಲುಕಿಕೊಂಡಿದ್ದ ಯುವಕರನ್ನು ಸ್ಥಳೀಯ ಯುವಕರು ಹರಸಾಹಸ ಪಟ್ಟು ಹೊರಗೆ ತೆಗೆದಿದ್ದಾರೆ.

ಜಿ.ಪಂ.ಮಾಜಿ ಸದಸ್ಯ ಎಂ.ತುಂಗಪ್ಪ ಬಂಗೇರ, ಪುಂಜಾಲಕಟ್ಟೆ ಪೊಲೀಸರು ಸ್ಥಳದಲ್ಲಿದ್ದಾರೆ.

Exit mobile version