ಮಡಂತ್ಯಾರು: ಮಡಂತ್ಯಾರು ವಲಯದ ಮಾಲಾಡಿ ಗ್ರಾಮದ ಕೆತ್ತಿಗುಡ್ಡೆ ಹೊಸ ರಸ್ತೆ ಮತ್ತು ಸಂಪರ್ಕ ಸೇತುವೆ ರಚನೆಗೆ ಶ್ರೀ ಕ್ಷೇತ್ರ ಧರ್ಮಸ್ಥಳದಿಂದ ಒಂದು ಲಕ್ಷ ಮಂಜೂರು ಆಗಿದ್ದು ಮಂಜೂರಾತಿ ಪತ್ರವನ್ನು ಜನಜಾಗೃತಿ ವೇದಿಕೆಯ ಪ್ರಾದೇಶಿಕ ನಿರ್ದೇಶಕರು ವಿವೇಕ್ ವಿನ್ಸೆಂಟ್ ಪಾಯಸ್ ಸಮಿತಿಯವರಿಗೆ ವಿತರಣೆ ಮಾಡಿದ್ದರು.
ಈ ಸಂದರ್ಭದಲ್ಲಿ ಮಡಂತ್ಯಾರ್ ವಲಯದ ಜನಜಾಗೃತಿ ವೇದಿಕೆಯ ಅಧ್ಯಕ್ಷ ಪದ್ಮನಾಭ ಸಾಲ್ಯಾನ್, ಮಾಲಾಡಿ ಗ್ರಾಮ ಪಂಚಾಯತ್ ಸದಸ್ಯರಾದ ಬೆನೆಡಿಕ್ಟ್, ಸಮಿತಿ ಅಧ್ಯಕ್ಷರಾದ ಆಲ್ಬರ್ಟ್ ಡಿಸೋಜಾ, ಉಪಾಧ್ಯಕ್ಷರಾದ ಗಣೇಶ್ ಪ್ರಭು, ಕಾರ್ಯದಶಿ ಹರೀಶ್ ಪ್ರಭು ಮತ್ತು ಮಡಂತ್ಯಾರು ವಲಯದ ಮೇಲ್ವಿಚಾರಕರು ವಸಂತಕುಮಾರ್ ಹಾಗೂ ಸಮಿತಿ ಸದಸ್ಯರು ಉಪಸ್ಥಿತರಿದ್ದರು.