Site icon Suddi Belthangady

ಜುಲೈ 22-23ರವರೆಗೆ ಯೇನಪೋಯದಲ್ಲಿ ನಿರಂತರ 25 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿಗೆ ಬೆಳ್ತಂಗಡಿ ಶಾಸಕ ಹರೀಶ್ ಪೂಂಜಾರಿಂದ ಶುಭ ಹಾರೈಕೆ

ಬೆಳ್ತಂಗಡಿ: ಯೇನಪೋಯ ಮೆಡಿಕಲ್ ಕಾಲೇಜು, ಯೇನಪೋಯ ವಿಶ್ವವಿದ್ಯಾಲಯ ಸಂಸ್ಥೆಯ ಬೆಳ್ಳಿಹಬ್ಬದ ಸಂಭ್ರಮದಲ್ಲಿ ಯೋಗದ ಜಾಗೃತಿ ಮೂಡಿಸಲು ಭವಿಷ್ಯದ ದುಃಖಗಳನ್ನು ದೂರ ಮಾಡಲು ಯೋಗ ಎಂಬ ಧ್ಯೇಯ ದೊಂದಿಗೆ ಮುಗೇರಡ್ಕ ಸರಕಾರಿ ಶಾಲಾಭಿವೃದ್ಧಿಗೆ ವಿದ್ಯಾ ನಿಧಿ ಸಂಗ್ರಹಕ್ಕಾಗಿ 25 ಗಂಟೆಗಳ ಮ್ಯಾರಥಾನ್ ಯೋಗ ತರಬೇತಿಯು ಜುಲೈ 22 ಸೋಮವಾರ 09 ರಿಂದ ಜುಲೈ 23 ಮಂಗಳವಾರ 10 ಗಂಟೆಯವರೆಗೆ 25 ಗಂಟೆಗಳ ನಿರಂತರ ಯೋಗ ತರಬೇತಿ ನಡೆಯಲಿದೆ.

ಯೋಗ ಗುರು ಕುಶಾಲಪ್ಪ ಗೌಡ ರವರು ತಲಾ ಒಂದೂವರೆ ಗಂಟೆಯ 17 ಬ್ಯಾಚ್ ಗಳಲ್ಲಿ ತರಬೇತಿ ನೀಡಲಿದ್ದು, ಭಾಗವಹಿಸುವ ಶಿಬಿರಾರ್ಥಿಗಳಿಗೆ ರೂಪಾಯಿ 500 ಮೌಲ್ಯದ ಯೋಗ ಪುಸ್ತಕ, ಯೋಗ ಭಟ್ಟೆ, ಯೋಗ ಕ್ಯಾಲೆಂಡರ್,ಯೋಗ ಪ್ರಮಾಣ ಪತ್ರ ಮತ್ತು ಉಪಹಾರ ನೀಡಲಾಗುವುದು, ಮುಗೇರಡ್ಕ ಸರ್ಕಾರಿ ಶಾಲಾ ಸೇವಾ ಟ್ರಸ್ಟ್ ನಾ ವಿದ್ಯಾನಿಧಿಗಾಗಿ ಆಯೋಜಿಸಿರುವ ಈ ಶಿಬಿರಕ್ಕೆ ವಿದ್ಯಾರ್ಥಿಗಳಿಂದ ರೂಪಾಯಿ 100, ಸಾರ್ವಜನಿಕರಿಂದ ರೂಪಾಯಿ 200 ನ್ನು ದೇಣಿಗೆ ರೂಪದಲ್ಲಿ ಪಡೆಯಲಾಗುವುದು.

ಮೂರು ವಿಶ್ವ ದಾಖಲೆಯ ಪ್ರಯತ್ನ, ಮ್ಯಾರಥಾನ್ ಯೋಗ ಶಿಬಿರ ತರಬೇತಿಯ ಮೂಲಕ ಮೂರು ವಿಶ್ವ ದಾಖಲೆಯನ್ನು ಸಾರಿಸಲು ಪ್ರಯತ್ನಿಸಲಾಗುವುದು, ಒಂದೇ ಯೋಗ ಗುರು, ಒಂದೇ ವೇದಿಕೆಯಲ್ಲಿ ನಿರಂತರ 25 ಗಂಟೆ ಯೋಗ ತರಬೇತಿ ನೀಡುವುದು, ಈ ತರಬೇತಿಯಲ್ಲಿ 2500ಕ್ಕೂ ಮಿಕ್ಕಿ ವಿವಿಧ ವೈದ್ಯಕೀಯ ವಿದ್ಯಾರ್ಥಿಗಳು ತರಬೇತಿ ಒಳಗಾಗುವುದು, 4000ಕ್ಕೂ ಮಿಕ್ಕಿ ಯೋಗ ಶಿಬಿರಾರ್ಥಿಗಳಿಗೆ ತರಬೇತಿ ಪಡೆಯಲಿದ್ದಾರೆಂದು ಯೋಗ ಗುರು ಕುಶಾಲಪ್ಪ ಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Exit mobile version