ನಾವೂರು: ನಾವೂರು ದ.ಕ.ಜಿ.ಪಂ.ಹಿರಿಯ ಪ್ರಾಥಮಿಕ ಶಾಲೆಯ ಸಭಾ ಭವನದಲ್ಲಿ ಹಳೆ ವಿದ್ಯಾರ್ಥಿ ಸಂಘದ ಸಭೆ ಜು.14ರಂದು ಹಳೆ ವಿದ್ಯಾರ್ಥಿ ಸಂಘದ ಅಧ್ಯಕ್ಷ ಧರ್ಣಪ್ಪ ಮೂಲ್ಯ ಇವರ ಅಧ್ಯಕ್ಷತೆಯಲ್ಲಿ ನಡೆಯಿತು.ಅವರು ಪ್ರಾಸ್ತಾವಿಕವಾಗಿ ಮಾತನಾಡಿ ಇದುವರೆಗೆ ಹಳೆ ವಿದ್ಯಾರ್ಥಿ ಸಂಘ ನಡೆದು ಬಂದ ದಾರಿಯನ್ನು ಸಭೆಯ ಮುಂದಿರಿಸಿದರು.
ಶಾಲಾಭಿವೃದ್ಧಿ ಸಮಿತಿ ಸದಸ್ಯ ಡಾ.ಪ್ರದೀಪ್ ಮಾತಾಡಿ “ನನ್ನ ಶಾಲೆ ನಮ್ಮೂರ ಶಾಲೆ” ಎಂಬ ಪರಿಕಲ್ಪನೆಯಲ್ಲಿ ಹಳೆ ವಿದ್ಯಾರ್ಥಿಗಳು ಮಾಡಬಹುದಾದ ಕರ್ತವ್ಯಗಳ ಕುರಿತು ತಿಳಿಸಿದರು.ಬಾಲ್ಯದಲ್ಲಿ ಕಲಿತ ಶಾಲೆಯ ಅಭಿವೃದ್ಧಿಯಲ್ಲಿ ಹಳೆ ವಿದ್ಯಾರ್ಥಿ ಸಂಘದ ಮಹತ್ವವನ್ನೂ ತಿಳಿಸಿದರು.
ಶಾಲಾ ಮುಖ್ಯ ಶಿಕ್ಷಕಿ ರೋಹಿಣಿ ಸ್ವಾಗತಿಸಿದರು. ದೈಹಿಕ ಶಿಕ್ಷಕರಾದ ಪಂಚಾಕ್ಷರಪ್ಪ ಕಾರ್ಯಕ್ರಮವನ್ನು ನಿರೂಪಿಸಿದರು.
ನೂತನ ಅಧ್ಯಕ್ಷ ಸೆಬೆಸ್ಟಿನ್ ವಿ.ಪಿ. ಮಾತನಾಡಿ ಶಾಲೆಯ ಅಭಿವೃದ್ಧಿಗೆ ಎಲ್ಲರ ಸಹಕಾರವನ್ನು ಕೋರಿದರು. ಸಂಘಟನಾ ಕಾರ್ಯದರ್ಶಿ ಕೆ.ಮೋಹನ್ ಬಂಗೇರ ಕಾರಿಂಜ ಮಾತನಾಡಿ ಮುಂದೆ ನಾವು ಮಾಡಬೇಕಾದ ಕೆಲಸಕಾರ್ಯಗಳನ್ನು ಸಭೆಯ ಮುಂದಿಟ್ಟರು.
ಎಸ್ ಡಿ ಎಂ ಸಿ ಅಧ್ಯಕ್ಷ ದಿನೇಶ್ ಪ್ರಭು ಆಡಿಲು ಮಾತಾಡಿ ಹಳೆ ವಿದ್ಯಾರ್ಥಿಗಳು ಜೊತೆಗೂಡಿ ಜಾತಿ, ಧರ್ಮ, ಪಕ್ಷ ಮರೆತು ಒಟ್ಟಿಗೆ ಕೆಲಸ ಮಾಡಿ ಮಾದರಿ ಸರಕಾರಿ ಶಾಲೆಯನ್ನಾಗಿ ಮಾಡಲು ಸಹಕಾರ ಕೇಳಿ ವಂದಿಸಿದರು. ಹಳೆ ವಿದ್ಯಾರ್ಥಿಗಳು ಭಾಗವಹಿಸಿ ಕಾರ್ಯಕ್ರಮವನ್ನು ಯಶಸ್ವಿಗೊಳಿಸಿದರು.