Site icon Suddi Belthangady

ಜು.20ರಂದು ಅಳದಂಗಡಿ ಸಿಎ ಬ್ಯಾಂಕ್‌ನಿಂದ ಕಾಳುಮೆಣಸು, ಜಾಯಿಕಾಯಿ ಕೃಷಿ ಮಾಹಿತಿ ಸಂವಾದ- ಉಪಬೆಳೆಗಳಿಗೆ ಆದ್ಯತೆ ಉದ್ದೇಶ: ರಾಕೇಶ್ ಹೆಗ್ಡೆ

ಅಳದಂಗಡಿ: ಅಳದಂಗಡಿ ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘದಿಂದ ಕಾಳುಮೆಣಸು ಮತ್ತು ಜಾಯಿಕಾಯಿ ಕೃಷಿ ಮಾಹಿತಿ ಹಾಗೂ ಸಂವಾದ ಕಾರ್ಯಕ್ರಮ ಜು.20ರಂದು ಕೆದ್ದು ಶ್ರೀ ದೀಪಾ ಸಭಾಭವನದಲ್ಲಿ ಜರುಗಲಿದೆ.

ಅಳದಂಗಡಿ ಪ್ರಾಥಮಿಕ ಕೃಷಿಪತ್ತಿನ ಸಹಕಾರಿ ಸಂಘದ ಅಧ್ಯಕ್ಷ ರಾಕೇಶ್ ಹೆಗ್ಡೆ ಅಧ್ಯಕ್ಷತೆ ವಹಿಸುವರು. ಶಾಸಕ ಹರೀಶ್ ಪೂಂಜ ಉದ್ಘಾಟಿಸುವರು. ಎಸ್.ಸಿ.ಡಿ.ಸಿ.ಸಿ. ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಸಸಿ ವಿತರಣೆ ಮಾಡುವರು.

ಮುಖ್ಯ ಅತಿಥಿಗಳಾಗಿ ವಿಧಾನ ಪರಿಷತ್ ಸದಸ್ಯ ಪ್ರತಾಪಸಿಂಹ ನಾಯಕ್, ಮಾಜಿ ಸದಸ್ಯ ಹರೀಶ್ ಕುಮಾರ್, ಸಹಕಾರ ಅಭಿವೃದ್ಧಿ ಅಧಿಕಾರಿ ಪ್ರತಿಮಾ ಬಿ.ವಿ., ಹಿರಿಯ ಸಹಾಯಕ ತೋಟಗಾರಿಕಾ ನಿರ್ದೇಶಕ ಕೆ.ಎಸ್. ಚಂದ್ರಶೇಖರ್, ಬಳಂಜ ಗ್ರಾಮ ಪಂಚಾಯತ್ ಅಧ್ಯಕ್ಷೆ ಶೋಭಾ ಕುಲಾಲ್, ಅಳದಂಗಡಿ ಗ್ರಾಪಂ ಅಧ್ಯಕ್ಷೆ ಸರಸ್ವತಿ, ಸುಲ್ಕೇರಿ ಗ್ರಾಪಂ ಅಧ್ಯಕ್ಷೆ ಗಿರಿಜಾ, ಸಂಪನ್ಮೂಲ ವ್ಯಕ್ತಿಗಳಾಗಿ ಕಾಳುಮೆಣಸು ಕೃಷಿಕ ಸುರೇಶ್ ಬಲ್ನಾಡು, ಜಾಯಿಕಾಯಿ ಕೃಷಿ ಸಾಧಕ ಕಲ್ಮಡ್ಕ ಗ್ರಾಮದ ಟಿ.ಆರ್. ಸುರೇಶ್ಚಂದ್ರ ತೊಟ್ಟೆತ್ತೋಡಿ, ಕಾಳುಮೆಣಸು, ಸಿಲ್ವ‌ರ್ ವೋಕ್, ಕಾಫಿ ಬೆಳೆಗಾರ ಪುತ್ತೂರಿನ ಅಜಿತ್ ಪ್ರಸಾದ್ ರೈ ಕಾಯರ್‌ತಡಿ ಭಾಗವಹಿಸುವರು.

ಶಂಕರ್ ಭಟ್ ಕಟ್ಟೂರು, ಈಶ್ವರ ಪೂಜಾರಿ ಬಿರ್ಮಜಿ ಕುದ್ಯಾಡಿಯವರಿಗೆ ಸನ್ಮಾನ ಕಾರ್ಯಕ್ರಮ ನಡೆಯಲಿದೆ.ಸಂಘದ ಸದಸ್ಯರಿಗೆ ಕಾಳುಮೆಣಸಿನ ಗಿಡಗಳನ್ನು ಉಚಿತವಾಗಿ ವಿತರಿಸಲಾಗುವುದು.

Exit mobile version