Site icon Suddi Belthangady

ಇಳಂತಿಲ: ನೋಂದಾಯಿತ ಕಟ್ಟಡ-ನಿರ್ಮಾಣ ಕಾರ್ಮಿಕರ ಉಚಿತ ಆರೋಗ್ಯ ತಪಾಸಣಾ ಶಿಬಿರ

ಇಳಂತಿಲ: ಇಳಂತಿಲ ಗ್ರಾಮ ಪಂಚಾಯತ್, ಕರ್ನಾಟಕ ಕಟ್ಟಡ ಮತ್ತು ನಿರ್ಮಾಣ ಕಟ್ಟಡ ಕಾರ್ಮಿಕರ ಕಲ್ಯಾಣ ಮಂಡಳಿ ಇದರ ಸಂಯುಕ್ತ ಆಶ್ರಯದಲ್ಲಿ ಜು.16ರಂದು ಇಳಂತಿಲ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ನೋಂದಾಯಿತ ಕಟ್ಟಡ ಮತ್ತು ನಿರ್ಮಾಣ ಕಾರ್ಮಿಕರಿಗೆ ಹಾಗೂ ಅವಲಂಬಿತರಿಗೆ ಉಚಿತ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.

ಗ್ರಾ.ಪಂ.ಅಧ್ಯಕ್ಷ ತಿಮ್ಮಪ್ಪ ಗೌಡ ಇಳಂತಿಲ ದೀಪ ಪ್ರಜ್ವಲಿಸಿಸುವ ಮೂಲಕ ಶಿಬಿರಕ್ಕೆ ಚಾಲನೆ ನೀಡಿದರು. ಉಪಾಧ್ಯಕ್ಷೆ ಸವಿತಾ ಹೆಚ್., ಪಿಡಿಓ ಸುಮಯ್ಯ, ಸದಸ್ಯ ಇಸೂಬು, ಡಾ.ಪ್ರಜ್ಞಾ ಹಾಗೂ ಕಾರ್ಯದರ್ಶಿ ವಿಜಯ ವೇದಿಕೆಯಲ್ಲಿ ಉಪಸ್ಥಿತರಿದ್ದರು.

Exit mobile version