Site icon Suddi Belthangady

ಬಂಟ್ವಾಳ ಅಂಚನ್ ಸಿಲ್ಕ್ಸ್ ನಲ್ಲಿ ಅಂಚನೋತ್ಸವ

ಬೆಳ್ತಂಗಡಿ: ಬಂಟ್ವಾಳ ಬೈಪಾಸಿನಲ್ಲಿರುವ ಅಂಚನ್ ಸಿಲ್ಕ್ಸ್ ನಲ್ಲಿ ಜು.8ರಿಂದ ಆರಂಭ ಗೊಂಡಿದ್ದು ಅಂಚನೋತ್ಸವ ಡಿಸ್ಕೌಂಟ್ ಸೇಲ್ ಆ.8ರವರೆಗೆ ನಡೆಯಲಿದೆ.

ಈಗಾಗಲೇ ಗ್ರಾಹಕರಿಂದ ಅಂಚನೋತ್ಸವಕ್ಕೆ ಉತ್ತಮ ಸ್ಪಂದನೆ ದೊರೆಯುತ್ತಿದ್ದು ಹೊರ ಜಿಲ್ಲೆಯಿಂದ ಗ್ರಾಹಕರ ಆಗಮಿಸುತ್ತಿದ್ದು ಅಂಚನೋತ್ಸವದಲ್ಲಿ ಭಾಗಿಯಾಗುತ್ತಿದ್ದಾರೆ. ಮಳಿಗೆಯಲ್ಲಿ ಮದುವೆ ಸೀರೆಗಳ ವಿಭಾಗ, ಮಹಿಳೆಯರ ಉಡುಪುಗಳು, ಪುರುಷರ ಸಿದ್ದ ಉಡುಪುಗಳು, ಮಕ್ಕಳ ಉಡುಪುಗಳು, ಫ್ಯಾನ್ಸಿ ಫುಟ್‌ವೇರ್‌ಗಳ ವಿಶೇಷ ಮಳಿಗೆಗಳು ಹಾಗೂ ವಿವಿಧ ಹೆಸರಾಂತ ಬ್ರ್ಯಾಂಡ್ ಉಡುಪುಗಳ ಬೃಹತ್ ಸಂಗ್ರಹವಿದ್ದು, ಗ್ರಾಹಕರಿಗೆ ಆಯ್ಕೆಗೆ ವಿಪುಲ ಅವಕಾಶವಿದೆ. ಮದುವೆ ಸಹಿತ ಇನ್ನಿತರ ಎಲ್ಲ ಶುಭಸಮಾರಂಭಗಳಿಗೆ ಬೇಕಾದ ಅತ್ಯುತ್ತಮ ದರ್ಜೆಯ ಉಡುಪುಗಳು ಅಂಚನ್ ಸಿಲ್ಕ್ಸ್ ನಲ್ಲಿ ಲಭ್ಯವಿದೆ.

ಮಹಿಳೆಯರ ಸಿದ್ದ ಉಡುಪುಗಳಾದ ಕುರ್ತಾ, ಲೆಗ್ಗಿಂಗ್ಸ್ ಚೂಡಿದಾರ್, ಫ್ಯಾನ್ಸಿ ಸೀರೆಗಳು, ಕಾಟನ್ ಸೀರೆಗಳು, ರೇಷ್ಮೆ ಸೀರೆಗಳು ಕೈಗೆಟಕುವ ದರದಲ್ಲಿ ಲಭ್ಯವಿದೆ. ಎಲ್ಲ ವಯೋಮಾನದವರಿಗೆ ಬೇಕಾದಂಥ ಉತ್ತಮ ದರ್ಜೆಯ ವಸ್ತ್ರಗಳು ಬಂಟ್ವಾಳ ಬೈಪಾಸ್‌ನಲ್ಲಿರುವ ಅಂಚನ್ ಸಿಲ್ಕ್ಸ್ ನಲ್ಲಿ ಲಭ್ಯವಿದೆ. ನಮ್ಮ ಗ್ರಾಹಕರಿಗೆ ಅತಿ ಕಡಿಮೆ ದರದಲ್ಲಿ ಉನ್ನತ ಗುಣಮಟ್ಟದ ವಸ್ತ್ರಗಳನ್ನು ಸಿಗಬೇಕೆನ್ನುವ ದೃಷ್ಟಿಯಿಂದ ನೇರವಾಗಿ ಕಂಪೆನಿಯಿಂದಲೇ ಖರೀದಿಸಿದ ಆಕರ್ಷಕ ಉಡುಪುಗಳ ಬೃಹತ್ ಸಂಗ್ರಹ ಮಳಿಗೆಯಲ್ಲಿದೆ. ಜತೆಗೆ ವಿವಿಧ ಶೈಲಿಯ ಫ್ಯಾನ್ಸಿ ಐಟಂ, ಫುಟ್‌ವೇರ್ ಸಂಗ್ರಹಗಳೂ ಇಲ್ಲಿವೆ ಎಂದು ಮಳಿಗೆಯ ಪ್ರಕಟನೆ ತಿಳಿಸಿದೆ.

Exit mobile version