Site icon Suddi Belthangady

ಕೊಕ್ಕಡ ಗ್ರಾಮ ಪಂಚಾಯತಿ ವತಿಯಿಂದ ಬಸ್ಸು ತಂಗುದಾಣದಲ್ಲಿ ಗೂಡು

ಕೊಕ್ಕಡ: ಕೊಕ್ಕಡ ಗ್ರಾಮ ಪಂಚಾಯತಿ ಅಮೃತ ಗ್ರಾಮ ಯೋಜನೆಯಡಿಯ ಅನುದಾನದಲ್ಲಿ ನೂತನ ಪುಸ್ತಕ ಗೂಡನ್ನು ಕೊಕ್ಕಡ ಪೇಟೆಯ ಬಸ್ಸು ತಂಗುದಾಣದಲ್ಲಿ ಜು.12ರಂದು ಉದ್ಘಾಟಿಸಲಾಯಿತು.ಕೊಕ್ಕಡ ಗ್ರಾಮ ಪಂಚಾಯಿತಿನ ಅಧ್ಯಕ್ಷೆ ಬೇಬಿ ದೀಪ ಬೆಳಗಿಸುವ ಮೂಲಕ ಉದ್ಘಾಟಿಸಿದರು.

ಉಪಾಧ್ಯಕ್ಷ ಪ್ರಭಾಕರ ಗೌಡ, ನಿಕಟಪೂರ್ವ ಅಧ್ಯಕ್ಷ ಯೋಗೀಶ್ ಆಲಂಬಿಲ, ಪಂಚಾಯಿತಿನ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್, ಪಂಚಾಯಿತಿನ ಸದಸ್ಯರು, ಸಿಬ್ಬಂದಿಗಳು, ಗ್ರಂಥಪಾಲಕರು ಹಾಗೂ ಕೊಕ್ಕಡ ಪ್ರಾಥಮಿಕ ಶಾಲೆಯ ವಿದ್ಯಾರ್ಥಿಗಳು ಹಾಗೂ ಮುಖ್ಯಶಿಕ್ಷಕಿ ಉಪಸ್ಥಿತರಿದ್ದರು.

“ಅತಿ ಹೆಚ್ಚಿನ ಸಂಖ್ಯೆಯಲ್ಲಿ ಶಾಲಾ, ಕಾಲೇಜಿನ ವಿದ್ಯಾರ್ಥಿಗಳು ಈ ಬಸ್ ತಂಗುದಾಣಕ್ಕೆ ಬರುತ್ತಿರುವುದರಿಂದ ಇಲ್ಲಿ ಪುಸ್ತಕದ ಗೂಡು ಅನ್ನು ಮಾಡಲಾಗಿದೆ. ವಿದ್ಯಾರ್ಥಿಗಳು ಬಸ್ ಕಾಯುವ ಬಿಡುವಿನ ಸಮಯದಲ್ಲಿ ಪುಸ್ತಕ ಓದುದರಿಂದ ಜ್ಞಾನಾರ್ಜನೆ ಹೆಚ್ಚಿಸುವುದು ಅಲ್ಲದೆ ಸಮಯದ ಸದುಪಯೋಗವಾಗುತ್ತದೆ ಎಂಬ ಉದ್ದೇಶದಿಂದ ಮಾಡಲಾಗಿದೆ. ಎಲ್ಲರೂ ಇದರ ಅನುಕೂಲವನ್ನು ಪಡೆದುಕೊಳ್ಳುವಂತೆ ಮಾಧ್ಯಮದ ಮೂಲಕ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ದೀಪಕ್ ರಾಜ್ ಮಾಧ್ಯಮದ ಮೂಲಕ ವಿನಂತಿಸಿಕೊಂಡರು”

Exit mobile version