Site icon Suddi Belthangady

ಮಹಿಳಾ ಬಿಲ್ಲವ ವೇದಿಕೆ ಮತ್ತು ಸುಜಿತಾ ವಿ.ಬಂಗೇರರಿಂದ ವಸಂತ ಬಂಗೇರರ ಸ್ಮರಣಾರ್ಥ ದಯಾ ವಿಶೇಷ ಚೇತನ ಮಕ್ಕಳಿಗೆ ವೀಲ್ ಚೇರ್ ಕೊಡುಗೆ

ಬೆಳ್ತಂಗಡಿ: ಬಿಲ್ಲವ ಮಹಿಳಾ ವೇದಿಕೆ ಬೆಳ್ತಂಗಡಿ ಹಾಗೂ ದಿ.ವಸಂತ ಬಂಗೇರ ರವರ ಪತ್ನಿ ಸುಜಿತಾ ವಿ.ಬಂಗೇರ ರವರ ವತಿಯಂದ ದಯಾ ವಿಶೇಷ ಶಾಲೆಯ ಮಕ್ಕಳ ಉಪಯೋಗಕ್ಕಾಗಿ 2 ವೀಲ್‌ಚೇರ್‌ಗಳನ್ನು ಶಾಲೆಗೆ ಜು.8ರಂದು ಹಸ್ತಾಂತರಿಸಲಾಯಿತು.

ಕಾರ್ಯಕ್ರಮದಲ್ಲಿ ವಂ.ಫಾ.ರೋಹನ್ ಲೋಬೋ ರವರು ಮಾತನಾಡಿ, ಮಾಜಿ ಶಾಸಕ ದಿ. ವಸಂತ ಬಂಗೇರರವರು ದಯಾಳ್‌ಬಾಗ್ ಆಶ್ರಮದಿಂದ ಹಿಡಿದು ಇಂದು ಸಂಸ್ಥೆಯು ನಡೆಸುತ್ತಿರುವ ದಯಾ ವಿಶೇಷ ಶಾಲೆಯ ವರೆಗೂ ನಮ್ಮ ಎಲ್ಲಾ ಆಗು ಹೋಗುಗಳಲ್ಲಿ ನಮ್ಮೊಂದಿಗಿದ್ದು, ನಮ್ಮನ್ನು ಹುರಿದುಂಬಿಸಿ, ನಮ್ಮನ್ನು ಬೆಳೆಸಿದ ಒಬ್ಬ ಉತ್ತಮ ವ್ಯಕ್ತಿತ್ವವನ್ನು ಕಳೆದುಕೊಡಿರುವ ವಿಷಯ ನಿಜಕ್ಕೂ ಅರಗಿಸಿಕೊಳ್ಳುವುದು ಕಷ್ಟಕರವಾಗಿದೆ.ಅವರು ಬೆಳ್ತಂಗಡಿ ತಾಲೂಕಿಗೆ “ಅನರ್ಘ್ಯ ರತ್ನ ” ಗುರುನಾರಾಯಣ ಸ್ವಾಮಿಯ ಒಂದೇ ಜಾತಿ, ಒಂದೇ ಮತ, ಒಂದೇ ಧರ್ಮ ತತ್ವದಂತೆಯೇ ಅವರು ಎಲ್ಲರನ್ನು ಸಮಾನರಾಗಿ ಕಂಡಿದ್ದಾರೆ.ನಾವು ಅದೇ ರೀತಿ ಬದುಕುತ್ತಿದ್ದೇವೆ ಎಂದರು.

ಬೆಳ್ತಂಗಡಿ ಶ್ರೀ ಗುರು ನಾರಾಯಣ ಸೇವಾ ಸಂಘದ ಅಧ್ಯಕ್ಷ ಜಯವಿಕ್ರಮ ಕಲ್ಲಾಪು ರವರು ಮಾತನಾಡಿ, ಕಳೆದ ಕೆಲವು ವರ್ಷಗಳಿಂದ ಬಂಗೇರ ರವರ ಹುಟ್ಟುಹಬ್ಬದ ಸಂಭ್ರಮವನ್ನು ನಾವು ದಯಾ ವಿಶೇಷ ಶಾಲೆಯ ಮಕ್ಕಳೊಂದಿಗೆ ಆಚರಿಸುತ್ತಾ ಬಂದಿದ್ದೇವೆ. ಸಮಾಜದಲ್ಲಿ ಕಡೆಗಣಿಸಲ್ಪಟ್ಟ ಜನರಿಗಾಗಿ ಅವಿರತ ಶ್ರಮಿಸಿದವರು ದಿ. ವಸಂತ ಬಂಗೇರ ರವರು, ಅವರ ಆಶಯಗಳನ್ನು ಇನ್ನು ಮುಂದೆಯೂ ನಾವೆಲ್ಲರೂ ಸೇರಿ ಈಡೇರಿಸಲು ಬದ್ಧರಾಗಿದ್ದೇವೆ ಎಂದರು. 2 ವೀಲ್‌ಚೇರ್‌ಗಳನ್ನು ಸಂಸ್ಥೆಗೆ ಹಸ್ತಾಂತರಿಸಲಾಯಿತು.

ಕಾಯಕ್ರಮದಲ್ಲಿ ಶ್ರೀ ಗುರುನಾರಾಯಣ ಸ್ವಾಮಿ ಸೇವಾ ಸಂಘ, ಬೆಳ್ತಂಗಡಿ ಇದರ ಅಧ್ಯಕ್ಷ ಜಯವಿಕ್ರಮ ಕಲ್ಲಾಪು, ಬಿಲ್ಲವ ಮಹಿಳಾ ವೇದಿಕೆ ಸ್ಥಾಪಕಾಧ್ಯಕ್ಷೆ ಸುಜಿತಾ ವಿ.ಬಂಗೇರ, ಬಿಲ್ಲವ ಮಹಿಳಾ ವೇದಿಕೆ ಬೆಳ್ತಂಗಡಿ ಅಧ್ಯಕ್ಷೆ ಸುಮತಿ ಪ್ರಮೋದ್ ಹಾಗೂ ಸಂಘದ ಮಾಜಿ ಅಧ್ಯಕ್ಷರಾದ ರಾಜಶ್ರೀ ರಮಣ್, ಕಾರ್ಯದರ್ಶಿ ಶಾಂಭವಿ ಪಿ ಬಂಗೇರ, ಶೋಭಾ ಜಯಕುಮಾರ್, ಉಪಾಧ್ಯಕ್ಷರಾದ ಯಶೋಧ ಕುತ್ಲೂರು, ಗುರುನಾರಾಯಣ ಸ್ವಾಮಿ ಸೇವಾ ಸಂಘದ ನಿರ್ದೇಶಕರಾದ ಉಷಾ ಶರತ್, ಲೀಲಾವತಿ, ಗುರುನಾರಾಯಣ ಸ್ವಾಮಿ ಸೇವಾ ಸಂಘದ ಮಾಜಿ ನಿರ್ದೇಶಕ ದಿನೇಶ್ ಕೋಟ್ಯಾನ್ ಉಪಸ್ಥಿತರಿದ್ದರು.

ಕಾರ್ಯಕ್ರಮದ ಸ್ವಾಗತ ಮತ್ತು ಧನ್ಯವಾದವನ್ನು ಸ್ಪೆಷಲ್ ಎಜುಕೇಟರ್ ಸುಜಾತ ನೆರವೇರಿಸಿದರು.

Exit mobile version