ಲಾಯಿಲ: ಭಗವಾನ್ ಶ್ರೀ ಸತ್ಯಸಾಯಿ ಬಾಬಾರವರ 100ನೇ ಹುಟ್ಟುಹಬ್ಬದ ಅಂಗವಾಗಿ ಪ್ರೇಮ ತರು ಎಂಬ ಸಸಿಗಳನ್ನು ನೆಡುವ ಕಾರ್ಯಕ್ರಮ ಜು.24ರಂದು ಶ್ರೀರಾಘವೇಂದ್ರ ಮಠದ ಪರಿಸರದಲ್ಲಿ ಶ್ರೀ ಸತ್ಯಸಾಯಿ ಸೇವಾ ಸಮಿತಿ ಬೆಳ್ತಂಗಡಿ ಇವರ ವತಿಯಿಂದ ಜರಗಿಸಲಾಯಿತು.
ಕಾರ್ಯಕ್ರಮದ ಉದ್ಘಾಟನೆಯನ್ನು ಶ್ರೀ ರಾಘವೇಂದ್ರ ಸೇವಾ ಪ್ರತಿಷ್ಠಾನದ ಅಧ್ಯಕ್ಷ ನಿವೃತ್ತ ಎಸ್ ಪಿ ಪೀತಾಂಬರ ಹೇರಾಜೆ ಉದ್ಘಾಟಿಸಿ, ಪರಿಸರದ ಉಳಿವಿಗಾಗಿ ಸಸ್ಯ ಸಂಕುಲವನ್ನು ಬೆಳೆಸಿ ಮನುಕುಲಕ್ಕೆ ಪ್ರಧಾನ ಮಾಡುವ ಈ ರಾಷ್ಟ್ರೀಯ ಕಾರ್ಯಕ್ರಮ ಅತ್ಯಂತ ಔಚಿತ್ಯ ಪೂರ್ಣ ಮತ್ತು ಅನುಕರಣಿಯ ಉದಾತ್ತ ಸೇವಾ ಸಾಧನೆ ಎಂದು ಪ್ರಶಂಶಿಸಿದರು. ಬೆಳ್ತಂಗಡಿ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಪದಾಧಿಕಾರಿಗಳು ಹಾಗೂ ಶ್ರೀ ಗುರು ರಾಘವೇಂದ್ರ ಸೇವಾ ಪ್ರತಿಷ್ಠಾನದ ಪದಾಧಿಕಾರಿಗಳು ಪಾಲ್ಗೊಂಡು ಸಹಕಾರ ನೀಡಿದರು. ಈ ಸಂದರ್ಭದಲ್ಲಿ ವಿವಿಧ ಜಾತಿಯ ಹಣ್ಣು ಹಾಗೂ ಔಷಧೀಯ ಗುಣವುಳ್ಳ ಸಸ್ಯಗಳನ್ನು ನೀಡಲಾಯಿತು ಮತ್ತು ವಿತರಣೆ ಮಾಡಲಾಯಿತು.
ಉಮಾ ರಾವ್, ಮೀನಾಕ್ಷಿ, ಸುವರ್ಣ ಲಕ್ಷ್ಮಿ, ಕುಸುಮಾವತಿ, ಶಾಲಿನಿ, ಸಿಂಧೂರ್, ಪ್ರಸನ್ನ ಆಚಾರ್, ವಸಂತ, ಶಾಂತಪ್ಪ, ಇವರು ಸಮಿತಿಯ ಪರವಾಗಿ ಪಾಲ್ಗೊಂಡಿದ್ದರು.ಶ್ರೀ ರಾಘವೇಂದ್ರ ಸ್ವಾಮಿ ಸೇವಾ ಪ್ರತಿಷ್ಠಾನದ ಪರಾಧಿಕಾರಿಗಳಾದ ವಸಂತ ಸುವರ್ಣ, ಮಹಾಬಲ ಶೆಟ್ಟಿ, ಜಯರಾಮ ಬಂಗೇರ ಹೆರಾಜೆ, ಕೃಷ್ಣಶೆಟ್ಟಿ, ಸಹಕರಿಸಿದರು.
ಕಾರ್ಯಕ್ರಮದ ಪ್ರಾಯೋಜಕತ್ವವನ್ನು ಅಕ್ಷಯ್ ಕುಮಾರ್ ವಹಿಸಿದ್ದರು.ಬೆಳ್ತಂಗಡಿ ಶ್ರೀ ಸತ್ಯಸಾಯಿ ಸೇವಾ ಸಮಿತಿಯ ಸಂಚಾಲಕ ಎ. ಕೃಷ್ಣಪ್ಪ ಪೂಜಾರಿ ಸ್ವಾಗತಿಸಿ ವಂದಿಸಿದರು