Site icon Suddi Belthangady

ಸುಲ್ಕೇರಿ: ಗ್ರಾಮ ಪಂಚಾಯತ್ ಗ್ರಾಮ ಸಭೆ

ಸುಲ್ಕೇರಿ: ಸುಲ್ಕೇರಿ ಗ್ರಾಮ ಪಂಚಾಯತ್ ನ 2024-25ನೇ ಸಾಲಿನ ಪ್ರಥಮ ಸುತ್ತಿನ ಗ್ರಾಮ ಸಭೆಯು ಗ್ರಾಮ ಪಂಚಾಯತ್ ಅಧ್ಯಕ್ಷೆ ಗಿರಿಜಾ ಇವರ ಅದ್ಯಕ್ಷತೆಯಲ್ಲಿ ಗ್ರಾಮ ಪಂಚಾಯತ್ ಸಭಾಭವನದಲ್ಲಿ ಜು.15ರಂದು ಜರಗಿತು.

ಮಾರ್ಗದರ್ಶಿ ಅಧಿಕಾರಿಯಾಗಿ ಕೃಷಿ ಇಲಾಖೆಯ ಗಣೇಶ್ ಭಾಗವಹಿಸಿ ಸಭೆಯನ್ನು ನಡೆಸಿಕೊಟ್ಟರು.

ಸಭೆಯಲ್ಲಿ ಉಪಾಧ್ಯಕ್ಷ ಶುಭಕರ ಪೂಜಾರಿ, ಸದಸ್ಯರಾದ ಪೂರ್ಣಿಮಾ, ರವಿ ಪೂಜಾರಿ, ಪ್ರೇಮಾ, ನಾರಾಯಣ ಪೂಜಾರಿ, ಯಶೋದ ಎಲ್ ಬಂಗೇರ ಉಪಸ್ಥಿತರಿದ್ದರು.

ಪಂಚಾಯತ್ ಅಭಿವೃದ್ಧಿ ಅಧಿಕಾರಿ ಗಾಯತ್ರಿ ಪಿ. ಸ್ವಾಗತಿಸಿ, ಜಮಾ ಖರ್ಚಿನ ವಿವರ ನೀಡಿದರು. ಪ್ರತೀಕ್ಷಾ ಅನುಪಾಲನಾ ವರದಿ ಮಂಡಿಸಿದರು.

ಗ್ರಾಮ ಸಭೆಯಲ್ಲಿ ತಾಲೂಕಿನ ಇಲಾಖಾಧಿಕಾರಿಗಳು ಇಲಾಖೆಯಿಂದ ಸಿಗುವ ಸಿಗುವ ಸೌಲಭ್ಯಗಳ ಮಾಹಿತಿ ನೀಡಿದರು.

Exit mobile version