ಶಿಶಿಲ: ಜು 14ರಂದು ಮಧ್ಯಾಹ್ನ ಬೀಸಿದ ಬಿರುಗಾಳಿಗೆ ಶಿಶಿಲದ ಅಡ್ಡಹಳ್ಳ ಎಂಬಲ್ಲಿ ರಸ್ತೆ ಹಾಗೂ 11 kV ಮತ್ತು LT ತಂತಿಗಳಿಗೆ ಬೃಹತ್ ಗಾತ್ರದ ಧೂಪದ ಮರವೊಂದು ಅಪಾಯಕಾರಿಯಾಗಿ ಬಿದ್ದುಕೊಂಡಿತ್ತು.
ಅಪಾಯವನ್ನು ಅರಿತ ಅರಸಿನಮಕ್ಕಿ, ಶಿಶಿಲ ವಿಪತ್ತು ನಿರ್ವಹಣಾ ತಂಡದ ಸದಸ್ಯರು ವಲಯ ಮೇಲ್ವಿಚಾರಕಿ ಶಶಿಕಲಾ ಹಾಗೂ ಸಂಯೋಜಕಿ ರಶ್ಮಿತಾ ಮಾರ್ಗದರ್ಶನದಲ್ಲಿ ಮೆಸ್ಕಾಂ ಸಿಬ್ಬಂದಿ ಸಮ್ಮುಖದಲ್ಲಿ ತೆರವುಗೊಳಿಸಿದರು.ಹಾಗೂ ಹತ್ತಿರದ ಮನೆಗೆ ಅಪಾಯಕಾರಿಯಾಗಿ ಬಾಗಿದ್ದ ಅದೇ ಮರದ ಉಳಿದ ಕೊಂಬೆಯೊಂದನ್ನು ಕೂಡಾ ತೆರವುಗೊಳಿಸಿದರು.
ತೆರವು ಕಾರ್ಯಾಚರಣೆಯಲ್ಲಿ ಸ್ವಯಂಸೇವಕರಾದ ಶೀನಪ್ಪ ನಾಯ್ಕ್, ಕುಶಾಲಪ್ಪ ಗೌಡ, ಸೋಮಶೇಖರ್ ಶಿಬಾಜೆ, ಗಂಗಾಧರ ಬದಿಗುಡ್ಡೆ ಅವಿನಾಶ್ ಭಿಡೆ, ಕಿರಣ್ ಸಂಕೇಶ, ರಮೇಶ ಬೈರಕಟ್ಟ, ಪವರ್ ಮ್ಯಾನ್ ಉಮೇಶ್, ಸಂತೋಷ, ಗ್ರಾ.ಪಂ ಅದ್ಯಕ್ಷ ಸುಧಿನ್ ಡಿ ಭಾಗವಹಿಸಿದ್ದರು.