Site icon Suddi Belthangady

ಮದ್ದಡ್ಕ ಸಮೀಪದ ಸುಂಟಾನ್ ಗುರಿ ಎಂಬಲ್ಲಿ ರಾಪ್ಟೀಯ ಹೆದ್ದಾರಿಯ ಕಾಮಗಾರಿಯಲ್ಲಿ ನಿರ್ಮಿಸಿದ ಚರಂಡಿಯ ಒಳಗೆ ತ್ಯಾಜ್ಯ ಕಸದ ರಾಶಿಗಳು

ಕುವೆಟ್ಟು: ಮದ್ದಡ್ಕ ಪರಿಸರದ ಹಲವು ಕಡೆ ಪುಂಜಾಲಕಟ್ಟೆ-ಚಾರ್ಮಾಡಿ ರಾಪ್ಟೀಯ ಹೆದ್ದಾರಿಯ ಕಾಮಗಾರಿಯಲ್ಲಿ ನಿರ್ಮಿಸಿದ ಚರಂಡಿಯ ಒಳಗೆ ತ್ಯಾಜ್ಯ ಕಸ ಬಾಟ್ಲಿಗಳನ್ನು ಸುರಿಯುತ್ತಿರುವುದು ಕಂಡು ಬಂದಿದೆ.

ಮದ್ದಡ್ಕ ಸಮೀಪದ ಸುಂಟಾನ್ ಗುರಿ ಎಂಬಲ್ಲಿ ಚರಂಡಿಯಲ್ಲಿ ಹಲವು ಕಡೆ ಬಹಳಷ್ಟು ತುಂಬಿಕೊಂಡಿದ್ದು ಒಳಗೆ ನೀರು ನಿಂತು ಕೊಳೆತ ದುರ್ವಾಸನೆ ಬರುತ್ತಿದೆ.ಮಳೆಗಾಳದ ಸಂದರ್ಭದಲ್ಲಿ ರೋಗ ಹರಡುವ ಭೀತಿಯಲ್ಲಿದ್ದಾರೆ.

ಜನರು ಚರಂಡಿಯ ಕಾಮಗಾರಿ ನಡೆಯುವ ಸಂದರ್ಭದಲ್ಲಿ ಕೆಲವು ಕಡೆ ಚರಂಡಿಯನ್ನು ಮುಚ್ಚದೆ ಇದ್ದ ಕಾರಣ ಕಿಡಿ ಕೇಡಿಗಳು ಇದರ ಒಳಗೆ ಸುರಿಯುತ್ತಿದ್ದು ತಕ್ಷಣ ಹೆದ್ದಾರಿ ಕಾಮಗಾರಿಯ ನಡೆಸುವ ಗುತ್ತಿಗೆದಾರರಿಗೆ ಸಂಭಂದ ಪಟ್ಟ ಇಲಾಖೆಯವರು ಗಮನಕ್ಕೆ ತಂದು ಸಾರ್ವಜನಿಕರ ಆರೋಗ್ಯದ‌ ಕಾಪಾಡುವ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಬೇಕಾಗಿದೆ ಎಂದು ಗ್ರಾಮಸ್ಥರು ಆಗ್ರಹಿಸಿದ್ದಾರೆ.

Exit mobile version