Site icon Suddi Belthangady

ಬೆಳ್ತಂಗಡಿ: ಅನ್ಸಿಲ್ ಫ್ಯಾಷನ್ ಬೋಟಿಕ್ ಶುಭಾರಂಭ

ಬೆಳ್ತಂಗಡಿ: ಇಲ್ಲಿಯ ಟಿ.ವಿ.ಎಸ್. ಶೋರೂಂ ಎದುರು ಇರುವ ಮಂಜುನಾಥ ಕಾಂಪ್ಲೆಕ್ಸ್ ನಲ್ಲಿ ಅನ್ಸಿಲ್ ಫ್ಯಾಷನ್ ಬೋಟಿಕ್ ಇದರ ಶುಭಾರಂಭವು ಜು.14ರಂದು ನಡೆಯಿತು.

ಇದರ ಉದ್ಘಾಟನೆಯನ್ನು ಬೆಳ್ತಂಗಡಿ ಧರ್ಮ ಪ್ರಾಂತ್ಯದ ವಿಗಾರ್ ಜೆರಾಲ್ ವಂ.ಫಾ.ಜೋಸ್ ವಾಲಿಯ ಪರಂಬಿಲ್ ನೆರವೇರಿಸಿ ಆಶೀರ್ವಚನ ಗೈದರು. ಈ ಸಂದರ್ಭದಲ್ಲಿ ವೇಣೂರು ನವ ಚೇತನ ಆಂಗ್ಲ ಮಾಧ್ಯಮ ಶಾಲೆಯ ಮುಖ್ಯೋಪಾದ್ಯಯಿನಿ ಸಿ.ಶಾಲಿನಿ, ಧರ್ಮ ಭಗಿನಿಗಳಾದ ಸಿ.ಅನಿತಾ, ಸಿ.ಜೋಯ್ಲಿನ್, ಬೆಳ್ತಂಗಡಿ ಧರ್ಮ ಪ್ರಾಂತ್ಯದ ಧರ್ಮ ಭಗಿನಿಗಳಾದ ಸಿ.ಪಾವನ, ಸಿ.ನೊಬುಲ್, ಸಿ.ಡೈಸಿ, ಸಿರಿಯನ್ ಕ್ಯಾಥೊಲಿಕ್ ಸಹಕಾರಿ ಸಂಘದ ಅಧ್ಯಕ್ಷ ಅನಿಲ್ ಎ.ಜೆ., ಡೋಲಿ ಫ್ಯಾಶನ್ ನ ವಲೇರಿಯನ್ ಪಾಯ್ಸ್, ಟಿ.ವಿ.ಎಸ್ ಮೋಟಾರ್ಸ್ ಮ್ಯಾನೇಜರ್ ಅಶೋಕ್ ಮೋನಿಸ್, ಸನ್ನಿತ್, ಜೋರ್ಜ್, ಜೆಸಿಂತ ಸಿಲ್ವಿಯಾ ಮೋನಿಸ್ ಮೊದಲಾದವರು ಉಪಸ್ಥಿತರಿದ್ದರು.

ಮಾಲಕಿ ಲಿನ್ಸ ಸರ್ವರನ್ನು ಸ್ವಾಗತಿಸಿ, ಸರ್ವರ ಸಹಕಾರ ಕೋರಿದರು. ಇಲ್ಲಿ ಬ್ಯಾಪ್ಟಿಸಮ್, ಹೋಲಿ ಕಮ್ಯುನಿಯನ್, ವೆಡ್ಡಿಂಗ್ ಎಸ್ಸಸ್ಸರಿಸ್ ಗಳು (ಮದು ಮಗಳ ಗೌನ್, ಮಕ್ಕಳ ಬ್ಯಾಪ್ಟಿಸಮ್ ಡ್ರೆಸ್, ಹೋಲಿ ಕಮ್ಯುನಿಯನ್ ಡ್ರೆಸ್, ವಿವಿಧ ಮೊಡೆಲ್ ಕ್ಯಾಂಡಲ್) ಲಭ್ಯವಿದೆ ಎಂದು ತಿಳಿಸಿದ್ದಾರೆ.

Exit mobile version