Site icon Suddi Belthangady

80 ಲಕ್ಷ ವೆಚ್ಚದಲ್ಲಿ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೌತಡ್ಕ ದೇವಳದ ಆವರಣದಲ್ಲಿ ಮಲ್ಲಿಕಾ ಪಕ್ಕಳರಿಂದ ಶಿಲಾನ್ಯಾಸ

ಕೊಕ್ಕಡ: ಸುಮಾರು 80 ಲಕ್ಷ ವೆಚ್ಚದಲ್ಲಿ ನಿರ್ಮಾಣಗೊಳ್ಳಲಿರುವ ತ್ಯಾಜ್ಯ ವಿಲೇವಾರಿ ಘಟಕಕ್ಕೆ ಸೌತಡ್ಕ ದೇವಳದ ಆವರಣದಲ್ಲಿ ರಾಜ್ಯ ಧಾರ್ಮಿಕ ಪರಿಷತ್ ಸದಸ್ಯೆ ಮಲ್ಲಿಕಾ ಪಕ್ಕಲ್ ಸಮ್ಮುಖದಲ್ಲಿ ಅರ್ಚಕರಾದ ಸತ್ಯಪ್ರಿಯ ಕಲ್ಲೂರಾಯ ಶಿಲಾನ್ಯಾಸ ಪೂಜೆ ನೆರವೇರಿಸಿದರು.ಬಳಿಕ ಮಾತನಾಡಿದ ಮಲ್ಲಿಕಾ ಪಕ್ಕಲ್ ರವರು ಮಾಜಿ ಟ್ರಸ್ಟಿಗಳ ಸತತ ಪರಿಶ್ರಮದಿಂದ ಈ ತ್ಯಾಜ್ಯ ವಿಲೇವಾರಿ ಘಟಕ ನಿರ್ಮಿಸಲು ಸಾಧ್ಯವಾಗ್ತಿದೆ.

ತಮ್ಮ ಅವಧಿ ಮುಗಿದ ಮೇಲು ನಿರಂತವಾಗಿ ನನ್ನನ್ನು ಸಂಪರ್ಕಿಸಿ ಘಟಕಕ್ಕೆ ಅನುಮತಿ ದೊರಕಿಸಲು ಶ್ರಮ ಪಟ್ಟಿದ್ದಾರೆ ಅವರಿಗೆ ದೇವರು ಆಶೀರ್ವಾದ ಮಾಡಲಿ ಎಂದು ಹೇಳಿದರು.

ಈ ಸಂದರ್ಭದಲ್ಲಿ ದೇವಳದ ಆಡಳಿತ ಸಮಿತಿ ಮಾಜಿ ಅಧ್ಯಕ್ಷ ಹರೀಶ್ ರಾವ್ ಮುಂಡ್ರುಪ್ಪಾಡಿ, ಡಿಸಿಸಿ ಬ್ಯಾಂಕ್ ನಿರ್ದೇಶಕ ಕುಶಾಲಪ್ಪ ಗೌಡ ಪೂವಾಜೆ, ಕೊಕ್ಕಡ ಸಿಎ ಬ್ಯಾಂಕಿನ ಮಾಜಿ ಅಧ್ಯಕ್ಷ ವಿಶ್ವನಾಥ್ ಶೆಟ್ಟಿ, ನೈಮಿಷ ಹೌಸ್ ಆಫ್ ಸ್ಪೈಸಸ್ನ ಮಾಲಕ ಬಾಲಕೃಷ್ಣ ನೈಮಿಷ, ಮಾಜಿ ಟ್ರಷ್ಟಿ ಗಳಾದ ಪುರಂದರ ಕಡೀರ, ಪ್ರಶಾಂತ್ ಪೂವಾಜೆ, ವಿಠ್ಠಲ್ ಕುರ್ಲೆ ದೇವಳದ ಮ್ಯಾನೇಜರ್ ರಾಮಕೃಷ್ಣ ಮತ್ತು ದೇವಳದ ಸಿಬ್ಬಂದಿಗಳು ಉಪಸ್ಥಿತರಿದ್ದರು.

Exit mobile version